ಜೆಡಿಎಸ್ ಚಿಂತನ-ಮಂಥನ ಸಭೆಗೆ ಗೈರಾಗುತ್ತಾರಾ ಜಿಟಿ.ದೇವೇಗೌಡರು

ಗುರುವಾರ, 12 ಸೆಪ್ಟಂಬರ್ 2019 (11:26 IST)
ಮೈಸೂರು : ಇಂದು ಮೈಸೂರಿನಲ್ಲಿ ನಡೆಯಲಿರುವ ಜೆಡಿಎಸ್ ಚಿಂತನ-ಮಂಥನ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಸಭೆಗೆ ಜಿಟಿ.ದೇವೇಗೌಡರು ಗೈರಾಗುತ್ತಾರಾ ಎಂಬ ಅನುಮಾನ ವ್ಯಕ್ತವಾಗಿದೆ.
ಮೊನ್ನೆಯಷ್ಟೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದ ವೇಳೆ ಜಿಟಿಡಿ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಜೆಡಿಎಸ್ ಕಾರ್ಯಕ್ರಮದಿಂದ ದೂರವಿರುವುದಾಗಿ ಹೇಳಿದ್ದರು . ಹಾಗಾಗಿ ಇಂದಿನ ಸಭೆಗೆ ಅವರು ಹಾಜರಾಗುವುದು ಅನುಮಾನ ಎನ್ನಲಾಗಿದೆ


ಈ ಬಗ್ಗೆ ಸುದ್ಧಿಗಾರರೊಂದಿಗೆ ಮಾತನಾಡಿದ ಜಿಟಿ ದೇವೇಗೌಡರು, ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಇಲ್ಲದೆ ನಾನು ಸಭೆಹೆ ಹೋಗುವುದಾದರೂ ಹೇಗೆ? ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ