ಸತ್ಯವಂತರಿಗೆ ಇದು ಕಾಲವಲ್ಲ- ಸಿಟಿ ರವಿ

ಬುಧವಾರ, 11 ಸೆಪ್ಟಂಬರ್ 2019 (11:39 IST)
ಮೈಸೂರು : ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರು ಪ್ರತಿಭಟನೆಗೆ ನಡೆಸಿದ ಹಿನ್ನಲೆಯಲ್ಲಿ ‘ಸತ್ಯವಂತರಿಗೆ ಇದು ಕಾಲವಲ್ಲ’ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ‘ನಾನು ಸತ್ಯ ಹೇಳಿದರೆ ಕೆಲವರಿಗೆ ಅಪರ್ಥವಾಗುತ್ತದೆ. ಒಕ್ಕಲಿಗ ಸಮುದಾಯಕ್ಕೆ ಯಾರು ಆದರ್ಶ ಆಗಬೇಕು ಒಕ್ಕಲಿಗ ಸಮುದಾಯದವರೇ ತೀರ್ಮಾನ ಮಾಡಲಿ. ಶಾಂತವೇರಿ ಗೋಪಾಲಗೌಡರು, ಕೆಂಗಲ್ ಹನುಮಂತಯ್ಯ, ಕುವೆಂಪು ಅವರಂತಹ ಮಹನೀಯರು ಆದರ್ಶರಾಗಬೇಕೋ, ಯಾರು ಆದರ್ಶ ಆಗಬೇಕು ಎಂಬುದನ್ನು ತೀರ್ಮಾನ ಮಾಡಲಿ’ ಎಂದು ಹೇಳಿದ್ದಾರೆ.


ಇಡಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ‘ಇಡಿಗೆ ಯಾವ ಜಾತಿ ಇದೆ. ಯಾವ ಪಕ್ಷ ಇದೆ. ಇಡಿ ಹುಟ್ಟು ಹಾಕಿದವರು ಯಾರು? ಇಡಿ ಹುಟ್ಟು ಹಾಕಿದ್ದು ಭಾರತೀಯ ಜನತಾ ಪಾರ್ಟಿ ಅಲ್ಲ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ