ಜಿಟಿಡಿ ಅವರಿಗೆ ಪ್ಯೂಸ್ ಹೋಗಿದೆ. ಅದು ಶಾಕ್ ಹೊಡೆಯುವುದಿಲ್ಲ -ಹೆಚ್.ಡಿ.ಕುಮಾರಸ್ವಾಮಿ

ಗುರುವಾರ, 14 ನವೆಂಬರ್ 2019 (09:48 IST)
ಬೆಂಗಳೂರು : ಜೆಡಿಎಸ್ ನ ಹಿರಿಯ ಶಾಸಕ ಜಿ.ಟಿ.ದೇವೇಗೌಡರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಬಗ್ಗೆ ಇದೀಗ ಹೆಚ್.ಡಿ.ಕುಮಾರಸ್ವಾಮಿ ಜಿಟಿಡಿ ವಿರುದ್ಧ ವ್ಯಂಗ್ಯವಾಡಿದ್ದಾರೆ.




ಜೆಡಿಎಸ್ ನ ಹಿರಿಯ ಶಾಸಕ ಜಿಟಿ ದೇವೇಗೌಡರು ಜೆಡಿಎಸ್ ಬಿಡುತ್ತಾರೆ. ಇದು ಜೆಡಿಎಸ್ ಗೆ ಶಾಕ್ ನೀಡಲಿದೆ ಎಂದು ವರದಿ ಮಾಡಿದ್ದವು. ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಜಿಟಿಡಿ ಅವರಿಗೆ ಪ್ಯೂಸ್ ಹೋಗಿದೆ. ಅದು ಶಾಕ್ ಹೊಡೆಯುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.


ಅಲ್ಲದೇ ಎಂಎಲ್ ಸಿ ಪುಟ್ಟಣ್ಣ ಕೂಡ 3 ವರ್ಷದ ಹಿಂದೆ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗಿ ಟೋಪಿ ಹಾಕಿದ್ದಾರೆ. ಇನ್ನೂ ಆ ಶಾಕ್ ಈಗ ಹೇಗೆ ಹೊಡೆಯುತ್ತೆ. ಅಲ್ಲಿಯೂ ಕರೆಂಟ್ ಇಲ್ಲ. ಇದೆಲ್ಲಾ ಮುಗಿದ ಕಥೆಗಳು. ಮತ್ತೆ ಶಾಕ್ ಹೊಡೆಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ