ಐಷಾರಾಮಿ BMW ಕಾರಿನಲ್ಲಿ ಗನ್ ರವಾನೆ ...!
ಕಬ್ಬನ್ ಪಾರ್ಕ್ ಪೊಲೀಸರಿಗೆ ಬಂದಿತ್ತು ಗ್ರೇ ಕಲರ್ BMW ಕಾರ್ ಮಾಹಿತಿ.ಕಾರ್ ಸುಳಿವು ಪತ್ತೆ ಹಚ್ಚಿ ಸರ್ಚ್ ಮಾಡಿದ್ದ ಪೊಲೀಸರೆ ಶಾಕ್ ಆಗಿದ್ರು.ಹೈ ಫೈ ಕಾರಲ್ಲಿ ಪತ್ತೆಯಾಗಿತ್ತು ಮೂರು ಟಾಪ್ ಎಂಡ್ ಗನ್ ಮತ್ತು 99 ರೌಂಡ್ಸ್.ಇದನ್ನ ಹಿಡಿದು ಹೊರಟಿದ್ದವನು ನೀರಜ್ ಜೋಸೆಫ್.ಗನ್ ಮತ್ತು ರೌಂಡ್ಸ್ ಸಮೇತ ನೀರಜ್ ನನ್ನ ವಶಕ್ಕೆ ಪಡೆದ ಪೊಲೀಸ್ರು ತನಿಖೆ ಶುರುಮಾಡಿಕೊಂಡಿದ್ರು.ಕೇರಳ ಮೂಲದ ವ್ಯಕ್ತಿಯೊಬ್ಬ ನಾಗಲ್ಯಾಂಡ್ ನಲ್ಲಿ ಕಾಂಟ್ಯಾಕ್ಟ್ ಮಾಡಿ ಒಂದು ಗನ್ ಗೆ 70 ಸಾವಿರದಂತೆ ಮೂರು ಖರೀದಿ ಮಾಡಿದ್ದ.ಅದನ್ನ ನಾಗಲ್ಯಾಂಡ್ ನಿಂದ ಕೇರಳ ವ್ಯಕ್ತಿಗೆ ತಲುಪಿಸೊ ಜವಾಬ್ದಾರಿ ನೀರಜ್ ವಹಿಸಿದ್ದ.ಸದ್ಯ ಕಬ್ಬನ್ ಪಾರ್ಕ್ ಪೊಲೀಸ್ರು ಕೇರಳ ವ್ಯಕ್ತಿಗೆ ಜಾಡು ಪತ್ತೆ ಹಚ್ಚಲು ಮುಂದಾಗಿದ್ದಾರೆ.ಈಗಾಗಲೆ ಒಂದು ಟೀಂ ಕೆರಳ ತೆರಳಿದ್ದು ಆರೋಪಿ ಹುಡುಕಾಟ ಶುರುಮಾಡಿದ್ದಾರೆ.ಈ ಗನ್ ಗಳು ತುಂಬ ಹೈ ಎಂಡ್ ಗನ್ ಗಳಾಗಿದ್ದು ಪೊಲೀಸ್ರು ಕೇಸ್ ಅನ್ನ ತುಂಬಾ ಗಂಭೀರವಾಗಿ ಪೊಲೀಸ್ರು ತನಿಖೆ ನಡೆಸ್ತಿದ್ದಾರೆ..