ಕುಖ್ಯಾತ ರೌಡಿಗೆ ಗುಂಡೇಟು

ಶನಿವಾರ, 26 ಅಕ್ಟೋಬರ್ 2019 (19:55 IST)
ಕುಖ್ಯಾತ ರೌಡಿಯೊಬ್ಬನ ಮೇಲೆ ಫೈರಿಂಗ್ ನಡೆಸಿ ಬಂಧನ ಮಾಡಲಾಗಿದೆ.

ಕಳ್ಳತನ ಹಾಗೂ ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಹರೀಶ್ ಅಲಿಯಾಸ್ ರಾಬ್ರಿ ಹರೀಶ್ ಗೆ ಗುಂಡು ಹೊಡೆದು ಬೆಂಗಳೂರಿನ ಪೀಣ್ಯ ಪೊಲೀಸರು ಬಂಧನ ಮಾಡಿದ್ಧಾರೆ.

ಗುಂಡೇಟಿನಿಂದ ಗಾಯಗೊಂಡಿರೋ ರೌಡಿ ರಾಬ್ರಿ ಹರೀಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

ದಾಸರಹಳ್ಳಿಯ ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ರಾಬ್ರಿ ಹರೀಶ್ ಬೇಟೆಗೆ ಪೊಲೀಸರು ತೀವ್ರ ಶೋಧ ಮುಂದುವರಿಸಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ