ಸಿಎಂ ಪುತ್ರನ ಪರ ಸಚಿವ ಎಚ್‌‍.ಸಿ.ಮಹಾದೇವಪ್ಪ ಬ್ಯಾಟಿಂಗ್

ಗುರುವಾರ, 12 ಅಕ್ಟೋಬರ್ 2017 (13:06 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಯಾವುದೇ ಭೂ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಸಚಿವ ಎಚ್.ಸಿ, ಮಹಾದೇವಪ್ಪ ಯತೀಂದ್ರ ಪರ ಬ್ಯಾಟಿಂಗ್ ನಡೆಸಿದ್ದಾರೆ.
ಬಿಜೆಪಿ ಮುಖಂಡ ಬಿ.ಜಿ.ಪುಟ್ಟಸ್ವಾಮಿ ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ಸಮಯ ಸಾಧಕ ರಾಜಕಾರಣಿಗಳಿಗೆ ಜನತೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ವೈದ್ಯರಾಗಿದ್ದಾರೆ. ಅವರಿಗೆ ಸಾರ್ವಜನಿಕ ಜೀವನ ಇಷ್ಟವಿರಲಿಲ್ಲ. ಕೆಲ ಕಾರಣಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದಾರೆ. 
 
ಸಿಎಂ ಸಿದ್ದರಾಮಯ್ಯರಾಗಲಿ ಅಥವಾ ಅವರ ಪುತ್ರ ಯತೀಂದ್ರರಾಗಲಿ ಡಿನೋಟಿಫೈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಇದು ರಾಜಕಾರಣದ ಬೌಧ್ಧಿಕ ಅಧಃಪತನ ಎಂದು ಸಚಿವ ಎಚ್.ಸಿ.ಮಹಾದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಸಿಎಂ ಸಿದ್ದರಾಮಯ್ಯ ಡಿನೋಟಿಫೈ ಮಾಡುವ ಮೂಲಕ 300 ಕೋಟಿ ರೂಪಾಯಿಗಳ ಹಗರಣವೆಸಗಿದ್ದಾರೆ. ಇವರ ಪುತ್ರ ಯತೀಂದ್ರ ಶಾಂತಾ ಇಂಡೃಸ್ಟ್ರೀಸ್‌ಗಾಗಿ ಅಕ್ರಮವಾಗಿ ಭೂಮಿ ಪಡೆದಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ಜಿ. ಪುಟ್ಟಸ್ವಾಮಿ ಆರೋಪಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ