2 ದಿನಗಳಿಂದ ಬಿಜೆಪಿ ನಾಯಕರ ಕೈಗೆ ಸಿಗದೇ ಓಡಾಡುತ್ತಿರುವ ಹಾಲಪ್ಪ, ‘ಕೈ’ ಹಿಡಿತಾರಾ?!
ಇದಕ್ಕೆ ಸರಿಯಾಗಿ, ಸಿಎಂ ಸಿದ್ದರಾಮಯ್ಯ ಕೂಡಾ ನಿನ್ನೆ ಹಾಲಪ್ಪ ಪರವಾಗಿ ಮಾತನಾಡಿದ್ದರು. ಕಾಂಗ್ರೆಸ್ ಕೂಡಾ ಹಾಲಪ್ಪ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿಲ್ಲ. ಈ ಎಲ್ಲಾ ಬೆಳವಣಿಗೆಯ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿ ಜಿಲ್ಲಾ ನಾಯಕರೊಂದಿಗೆ ಸಭೆ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಲಪ್ಪ ಮನ ಒಲಿಸಿ ಸಾಗರ ಟಿಕೆಟ್ ನೀಡುವ ಭರವಸೆ ನೀಡಲು ಸೂಚಿಸಿದ್ದಾರೆ. ಆದರೆ ಹಾಲಪ್ಪ ಇದೀಗ ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಲಕ್ಷಣ ಕಾಣುತ್ತಿದೆ.