ಈ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹಾಫ್ ಸೆಂಚುರಿ

ಶನಿವಾರ, 25 ಏಪ್ರಿಲ್ 2020 (17:58 IST)
ರಾಜ್ಯದ ಈ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹಾಫ್ ಸೆಂಚುರಿ ದಾಟಿರೋದು ಜನರಲ್ಲಿ ಆತಂಕ ತರಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ತಬ್ಲಿಘಿ ಹೊರತು ಪಡಿಸಿ ಮೊದಲ ಬಾರಿ 2 ಕೇಸ್ ಗಳು ಪತ್ತೆಯಾಗಿದ್ದು, ಇದರಿಂದ 51 ಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿದೆ.

ಬೆಳಗಾವಿ ಜಿಲ್ಲೆಯಲ್ಲಿ   ಮತ್ತೆ  6  ಜನರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಎಲ್ಲವೂ  ಹಿರೇಬಾಗೇವಾಡಿ ಪ್ರಕರಣಗಳಾಗಿವೆ.

ಇದುವರೆಗೆ ಹಿರೇಬಾಗೇವಾಡಿ ಹಾಗೂ ಕುಡಚಿಯಲ್ಲಿ ತಬ್ಲಿಘಿಗಳಿಗೆ ಮಾತ್ರ ಸೀಮಿತತವಾಗಿದ್ದ ಕೊರೊನಾ ವೈರಸ್ ಈಗ  ಹಿರೇಬಾಗೇವಾಡಿ ಗ್ರಾಮದ ನಿವೃತ್ತ ಪೊಲೀಸ್ ಪೇದೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಓರ್ವರಿಗೆ ಸೋಂಕು ಕಂಡುಬಂದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ