ಕೋಟಿ ರೂಪಾಯಿಗಳ ದಿನಸಿ ವಿತರಿಸುತ್ತಿರುವ ಶಾಸಕ

ಶುಕ್ರವಾರ, 24 ಏಪ್ರಿಲ್ 2020 (18:52 IST)
ಲಾಕ್ ಡೌನ್ ನಡುವೆ ಸ್ವಂತ ಖರ್ಚಿನಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ದಿನಸಿಯನ್ನು ಶಾಸಕರೊಬ್ಬರು ವಿತರಣೆ ಮಾಡುತ್ತಿದ್ದಾರೆ.  

ಮಹಾಮಾರಿ ಕೋವಿಡ್ -19  ದಿನಗೂಲಿ ಮಾಡಿ ಜೀವನ ಸಾಗಿಸುವ ಬಡವರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಅಂತಹವರಿಗೆ ಸ್ವಂತ ಹಣ ಒಂದು ಕೋಟಿ ರೂಪಾಯಿ ಖರ್ಚಿನಲ್ಲಿ ದಿನಸಿ ವಸ್ತುಗಳನ್ನು ವಿತರಣೆ ಮಾಡುತ್ತಿದ್ದೇನೆ ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶಾಸಕ ಎ. ಎಸ್.ಪಾಟೀಲ್. ನಡಹಳ್ಳಿ ಹೇಳಿದ್ದಾರೆ.

ಮುದ್ದೇಬಿಹಾಳ, ನಾಲತ ವಾಡ, ತಾಳಿಕೋಟೆಯ ನಾನಾ ಭಾಗದಲ್ಲಿ ಸಕ್ಕರೆ, ರವೆ, ಖಾರಾ ಮಸಾಲಾ ಪದಾರ್ಥ ಚಹಾದ ಪುಡಿ, ಈರುಳ್ಳಿ, ತೊಗರಿ, ಆಲೂಗಡ್ಡೆ ಸೇರಿದಂತೆ ಇನ್ನಿತರೆ ಅಗತ್ಯ ಆಹಾರ ಸಾಮಗ್ರಿಗಳನ್ನು ಬಡವರಿಗೆ ವಿತರಣೆ ಮಾಡುತ್ತಿದ್ದೇನೆ.  ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಲಾಗುತ್ತಿದೆ ಎಂದಿದ್ದಾರೆ.  

ಕಡು ಬಡತನದಲ್ಲಿ ಹುಟ್ಟಿ ಬೆಳೆದ ನನಗೆ ಜನರ ಸಂಕಟಕ್ಕೆ ಮಿಡಿಯುವ ಗುಣವನ್ನು ತುಮಕೂರು ಸಿದ್ದಗಂಗಾ ಮಠದ ಸಂಸ್ಕೃತಿ ನನಗೆ ಕಲಿಸಿದೆ ಎಂದು ಶಾಸಕರು ತಿಳಿಸಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ