ಹಾಸನ ಜಿಲ್ಲಾ ಚುನಾವಣಾ ಫಲಿತಾಂಶ: ಜೆಡಿಎಸ್ 6, ಬಿಜೆಪಿ 1 ರಲ್ಲಿ ಗೆಲುವು

ಬುಧವಾರ, 16 ಮೇ 2018 (19:27 IST)
ರಾಜ್ಯ ವಿಧಾನಸಭಾ ಚುನಾವಣೆ 2018ಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಜಿಲ್ಲೆಯಲ್ಲಿನ 7 ವಿಧಾನಸಭಾ ಕ್ಷೇತ್ರದಲ್ಲಿ 6 ರಲ್ಲಿ ಜಾತ್ಯಾತೀತ ಜನತಾ ದಳ ಪಕ್ಷದ ಅಭ್ಯರ್ಥಿಗಳು ಜಯಶೀಲರಾಗಿದ್ದು ಹಾಸನ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರೀತಂ ಜೆ ಗೌಡ ಮೊದಲ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿರುತ್ತಾರೆ.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗಿರುವ ಜಾತ್ಯಾತೀತ ಜನತಾ ದಳ ಪಕ್ಷದ ಸಿ.ಎನ್.ಬಾಲಕೃಷ್ಣ ಅವರು ತಮ್ಮ ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಪುಟ್ಟೇಗೌಡ ಇವರಿಗಿಂತ 53 ಸಾವಿರಕ್ಕೂ ಹೆಚ್ಚಿನ ಅಂತರದಿಂದ ಜಯಶೀಲರಾಗಿದ್ದಾರೆ.
 
ಒಟ್ಟು ಚಲಾವಣೆಗೊಂಡಿರುವ 166355 ಮತಗಳಲ್ಲಿ ಸಿ.ಎನ್ ಬಾಲಕೃಷ್ಣ (ಜೆಡಿಎಸ್) 105516, ಮತ, ಸಿ.ಎಸ್ ಪುಟ್ಟೆಗೌಡ, ಕಾಂಗ್ರೇಸ್ 52504 ಮತಗಳು, ಶಿವನಂಜೇಗೌಡ ಭಾರತೀಯ ಜನತಾ ಪಕ್ಷಕ್ಕೆ 7506, ಎ.ಐ.ಎಂ.ಪಿ. ದ್ವಾರಕಾನಾಥ್ 415, ಬೊರೇಗೌಡ ಸೌ.ಜ.ಪಕ್ಷ 414 ಮತ ಪಡೆದವು 906 ನೋಟ ಮತಗಳು ಚಲಾವಣೆಗೊಂಡಿವೆ. 
 
ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಆಯ್ಕೆಯಾಗಿರುವ ಜಾತ್ಯಾತೀತ ಜನತಾ ದಳ ಪಕ್ಷದ ಕೆ.ಎಂ.ಶಿವಲಿಂಗೇಗೌಡ ಅವರು ತಮ್ಮ ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ.ಶಶಿಧರ್ ಇವರಿಗಿಂತ 43,689 ಮತಗಳ ಅಂತರದಿಂದ  ಜಯಶೀಲರಾಗಿರುತ್ತಾರೆ.
 
ಒಟ್ಟು ಚುನಾವಣೆಗೊಂಡಿರುವ ಮತಗಳು 171880, ಜನತಾ ದಳದ ಕೆ.ಎಂ ಶಿವಲಿಂಗೇಗೌಡರು 96986 ಮತ, ಇಂಡಿಯಾನ್ ನ್ಯಾಷನಲ್ ಕಾಂಗ್ರೆಸ್ ನ ಜಿ.ಬಿ ಶಶಿಧರ್ ಅವರಿಗೆ 50297 ಮತ ಪಡೆದಿದ್ದಾರೆ, ಭಾರತೀಯ ಜನತಾ ಪಾರ್ಟಿಯ ಜಿ. ಮರೀಸ್ವಾಮಿಯವರಿಗೆ 25258 ಮತ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಎನ್ ಸಿ ಚಂದ್ರಶೇಖರ್ ಅವರಿಗೆ 1354 ಮತ, ಸಾಮಾನ್ಯ ಜನತಾ ಪಾರ್ಟಿಯ ಜಗದೀಶ ಸಿ.ಬಿ 539 ಮತ, ಆಲ್ ಇಂಡಿಯ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯ ಸಾಹಿನ್ ಅವರಿಗೆ 446 ಮತ ಚಲಾಯಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು ಚಲಾತಿಸಿದ ಮತ: 171880, ನೋಟಾ ಮತಗಳು1079, ತಿರಸ್ಕøತ ಮತಗಳು 21.
 
ಬೇಲೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಜಾತ್ಯಾತೀತ ಜನತಾ ದಳ ಪಕ್ಷದ ಕೆ.ಎಸ್.ಲಿಂಗೇಶ್ ಅವರು ತಮ್ಮ ಸಮೀಪದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹೆಚ್.ಕೆ.ಸುರೇಶ್ ಇವರಿಗಿಂತ 19690 ಮತಗಳ ಅಂತರದಿಂದ ಜಯಶೀಲರಾಗಿ ವಿಧಾನ ಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿರುತ್ತಾರೆ.
 
ಇಂಡಿಯಾನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿ ಕೀರ್ತನ ರುದ್ರೇಶ್ಗೌಡ 39519, ಜನತಾ ದಳದ ಲಿಂಗೇಶ್ ಅವರಿಗೆ 64268, ಭಾರತೀಯ ಜನತಾ ಪಾರ್ಟಿಯ ಹೆಚ್ ಕೆ ಸುರೇಶ್ 44132, ಶಿವಸೇನದ ಅರುಣ್ ಎನ್ ಆರ್ 675, ಆರ್‍ಪಿಐ ನ ಹೆಚ್ ಬಿ ಚಂದ್ರ ಕಾಂತ್ 438, ಚೋಳಚನಾಯ್ಕ ಬಿ.ಡಿ ಪಕ್ಷೇತರ 1170, ಸಂಗಮೇಶ ಹೆಚ್.ಬಿ ಪಕ್ಷೇತರ 525, ನೋಟಾ 1106.
 
ಹಾಸನ ವಿಧಾನಸಭಾ ಕ್ಷೇತ್ರದಿಂದ ಮೊದಲನೇ ಬಾರಿಗೆ ಆಯ್ಕೆಯಾಗಿರುವ ಭಾರತೀಯ ಜನತಾ ಪಕ್ಷದ ಪ್ರೀತಂ ಜಿ. ಗೌಡ ಅವರು ತಮ್ಮ ಸಮೀಪದ ಪ್ರತಿ ಸ್ಪರ್ಧಿ ಜಾತ್ಯಾತೀತ ಜನತಾ ದಳ ಪಕ್ಷದ ಅಭ್ಯರ್ಥಿ ಹೆಚ್.ಎಸ್.ಪ್ರಕಾಶ್ ಇವರಿಗಿಂತ 13,006 ಸಾವಿರಕ್ಕೂ ಹೆಚ್ಚಿನ ಅಂತರದಿಂದ ಜಯಶೀಲರಾಗಿದ್ದು ಜಿಲ್ಲೆಯ ಮೊದಲ ಅಭ್ಯರ್ಥಿಯಾಗಿರುತ್ತಾರೆ.
 
ಭಾರತೀಯ ಜನತಾ ಪಕ್ಷದ ಪ್ರೀತಂ ಜೆ ಗೌಡ 63,348 ಮತಗಳು, ಜಾತ್ಯಾತೀತ ಜನತಾ ದಳದ ಹೆಚ್ ಎಸ್ ಪ್ರಕಾಶ್ 50,342, ಕಾಂಗ್ರೆಸ್ ಪಕ್ಷದ ಹೆಚ್ ಕೆ ಮಹೇಶ್ 38,101, ಎ.ಐ.ಎಂ.ಪಿ.ಯ ಜರೀನಾ ತಾಜ್378, ಅಂಬೇಡ್ಕರ್ ಪಕ್ಷದ ಧರ್ಮೆಗೌಡ 146, ಆರ್.ಎಸ್.ನ ನಿರ್ವಣಯ್ಯ ಉರುಫ್ ಚಂದ್ರಣ್ಣ ಕಲವತ್ತಿ 93 ಮತಗಳು,  ಲೋಕ ಅವಾಜ್ದಾಲ್‍ನ ಹೆಚ್.ಎ ನಂಜೇಗೌಡ 64, ಆರ್.ಪಿ.ಐ. ಪಕ್ಷದ ಸತೀಶ್ ಕೆ.ಎಚ್ 106, ಶಿವಸೇನೆ ಪಕ್ಷದ ಜಾನೇಕೆರೆ ಹೆಮಂತ್ ಸಿ 82, ಅಕ್ಮಲ್ ಜಾವಿದ್ ಪಕ್ಷೇತ್ರ 146, ಕೆ ಜೆ ಜಾಕೋಬ್ ಪಕ್ಷೇತ್ರ 99, ಮಹಮ್ಮದ್ ಷಾರ್‍ಜಿಲ್‍ಪಕ್ಷೇತ್ರ 214, ಆರ್.ಜಿ.ಎಸ್. ಸತೀಶ್ ಪಕ್ಷೇತರ 366 ಮತ ಒಟ್ಟು ಚಲಾಯಿಸಿದ ಮತಗಳು 154498, 953 ನೋಟಾ ಮತಗಳು ಚಲಾವಣೆಯಾಗೆದ್ದು 60 ಮತಗಳು ತಿರಸ್ಕøತವಾಗಿವೆ.
197-ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಮಾಜಿ ಸಚಿವ ಜಾತ್ಯಾತೀತ ಜನತಾ ದಳದ ಹೆಚ್.ಡಿ. ರೇವಣ್ಣ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಬಾಗೂರು ಮಂಜೇಗೌಡ ಇವರಿಗಿಂತ 42296 ಮತಗಳ ಅಂತರದಿಂದ ಜಯಗಳಿಸಿ ವಿಧಾನಸಭೆಗೆ ಮರು ಆಯ್ಕೆಯಾಗಿದ್ದಾರೆ.
 
ಜಾತ್ಯಾತೀತ ಜನತಾ ದಳ ರೇವಣ್ಣ 82,325 ಮತಗಳು, ಕಾಂಗ್ರೆಸ್ ಪಕ್ಷದ ಬಾಗೂರು ಮಂಜೇಗೌಡ 64898 ಮತ ಪಡೆದಿದ್ದಾರೆ, ಭಾರತೀಯ ಜನತಾ ಪಕ್ಷದ ಎಂ ಎನ್ ರಾಜು 3556, ರಿಪಬ್ಲಿಕ್‍ಸೇನಾ ಪಕ್ಷದ ಬಿ.ಕೆ ನಾಗರಾಜು 936, ಎ.ಐ.ಎಂ.ಇ.ಪಿ. ಯ ಮೊಹಮದ್ ಅನೀಫ್ 277, ಪಕ್ಷೇತ್ರ ಎಂ.ವiಹೇಶ 295, ಪಕ್ಷೇತ್ರ ಬಿ.ಎನ್.ಮಂಜೇಗೌಡ 604, ಹೆಚ್.ಡಿ.ರೇವಣ್ಣ ಪಕ್ಷೇತರವಾಗಿ ಸ್ಪರ್ಧಿಸಿ 441 ಮತ ಪಡೆದಿದ್ದಾರೆ 1007ನೋಟ ಮತಗಳು ಚಲಾಯಿಸಲಾವಣೆಗೊಂಡಿವೆ.
 
ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ  ಜಾತ್ಯಾತೀತ ಜನತಾ ದಳದ ಎ.ಟಿ.ರಾಮಸ್ವಾಮಿ  ಅವರು ತಮ್ಮ ಸಮೀಪದ ಸ್ಪರ್ಧಿ ಸಚಿವ ಕಾಂಗ್ರೆಸ್‍ನ ಎ.ಮಂಜು ಅವರಿಗಿಂತ 10653 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
 
ಕ್ಷೇತ್ರದಲ್ಲಿ ಒಟ್ಟು ಚಲಾಯಿಸಿದ ಮತ: 188904, ತಿರಸ್ಕøತ ಮತ 170, ಇದರಲ್ಲಿ ಎ.ಟಿ ರಾಮಸ್ವಾಮಿ ಜಾತ್ಯಾತೀತ ಜನತಾ ದಳ 85064 ಮತಗಳನ್ನು ಪಡೆದು, ಕಾಂಗ್ರೆಸ್ ಪಕ್ಷದ ಎ. ಮಂಜು 74411, ಭಾರತೀಯ ಜನತಾ ಪಕ್ಷ ಎಚ್ ಯೋಗಾ ರಮೇಶ್ 22679, ಬಿ.ಆರ್.ಅಂಬೇಡ್ಕರ್ ಜನತಾ ಪಕ್ಷದ ಮಂಜುನಾಥ ಹೆಚ್.ಪಿ.1035 ಮತಗಳು, ಆರ್.ಪಿ.ಐ. ಪಕ್ಷ ಲತಾ ಕೆ.ಎಂ. 481, ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷದ ಶೇಷೇಗೌಡ-3559, ಎ.ಐ.ಎಂ.ಇ.ಪಿ. ಪಕ್ಷದ ಸತ್ಯ ಹೆಚ್.ಟಿ. 486 ಮತ ಪಡೆದಿದ್ದಾರೆ 1189 ನೋಟಾ ಮತಗಳು ಚಲಾವಣೆಗೊಂಡಿವೆ.
 
ಸಕಲೇಪುರ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾಗಿರುವ ಜಾತ್ಯಾತೀತ ಜನತಾ ದಳ ಪಕ್ಷದ ಅಭ್ಯರ್ಥಿ ಮಾಜಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಅವರು  ತಮ್ಮ ಸಮೀಪದ ಸ್ಪರ್ಧಿ ಭಾರತೀಯ ಜನತಾ ಪಕ್ಷದ ನಾರ್ವೆ ಸೋಮಶೇಖರ್ ಅವರಿಗಿಂತ 4942 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
 
ಕ್ಷೇತ್ರದಲ್ಲಿ ಒಟ್ಟು ಚಲಾತಿಸಿದ ಮತ: 161008, ನೋಟ 1597 ಮತಗಳು ಚಲಾಯಿಸಲಾಗಿದೆ ತಿರಸ್ಕøತ ಮತ 191, ಟೆಂಡರ್ ವೋಟ್ 1. ಇದ್ದು ಜಾತ್ಯಾತೀತ ಜನತಾ ದಳದ ಎಚ್.ಕೆ ಕುಮಾರಸ್ವಾಮಿ 62262 ಮತಗಳು, ಕಾಂಗ್ರೆಸ್ ಪಕ್ಷದ ಸಿದ್ದಯ್ಯ 37,002 ಭಾರತೀಯ ಜನತಾ ಪಕ್ಷದ ನಾರ್ವೆ ಸೋಮಶೇಖರ್ 57320, ಎ.ಐ.ಎಂ.ಇ.ಪಿ. ಪಕ್ಷದ ಕೆ.ಆರ್ ಪ್ರದೀಪ್‍ಕುಮಾರ್ 1148, ಪಕ್ಷೇತ್ರ ಹೆಚ್.ಕೆ.ಕುಮಾರಸ್ವಾಮಿ 531, ಪಕ್ಷೇತ್ರ ಎಂ.ಚನ್ನಮಲ್ಲಯ್ಯ 572, ಪಕ್ಷೇತ್ರ ವಳಲಹಳ್ಳಿ ವೀರೇಶ್ 576.
 
ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 7 ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವನ್ನು ಜಿಲ್ಲಾಡಳಿತವು ವ್ಯವಸ್ಥಿತವಾಗಿ ಏರ್ಪಾಟು ಮಾಡಿ ಎಣಿಕೆ ಕಾರ್ಯವನ್ನು ಸುಸೂತ್ರವಾಗಿ ನೆರವೇರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ