ರಾಜ್ಯ ರಾಜಕೀಯದಲ್ಲಿ ರೆಸಾರ್ಟ್ ರಾಜಕಾರಣ

ಮಂಗಳವಾರ, 15 ಮೇ 2018 (18:02 IST)
ಬೆಂಗಳೂರು: ರಾಜ್ಯದ ಚುನಾವಣೆ ಕ್ಷಣಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ.  ಜೆ.ಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಸಿದ್ಧವಾಗಿದೆ. ಅದರ ಜತೆಗೆ ಬಹುಮತ ಗಳಿಸಲು ಬಿಜೆಪಿ ಯಾವ ದಾರಿ ತುಳಿಯುತ್ತದೆ ಎಂಬ ಯೋಚನೆಯೂ ಈ ಪಕ್ಷಗಳಲ್ಲಿ ಆತಂಕವನ್ನುಂಟುಮಾಡಿದೆ. ಈಗ ರೆಸಾರ್ಟ್ ರಾಜಕಾರಣದ ಭೀತಿ ಕಾಡುತ್ತಿದೆ.

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಹಕ್ಕುಮಂಡನೆಗೆ ಸಿದ್ಧರಾಗಿದ್ದಾರೆ. ರಾಜ್ಯಪಾಲರ ಬಳಿ ಉಭಯ ಪಕ್ಷದ ನಾಯಕರು ಹಕ್ಕು ಮಂಡಿಸಿದ್ದಾರೆ. ಎರಡೂ ಪಕ್ಷದ ನಾಯಕರುಗಳು ರಾಜ್ಯಪಾಲರಿಗೆ ಪತ್ರ ಸಲ್ಲಿಕೆ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆಯಬೇಕು, ಬಿಎಸ್ ಯಡಿಯೂರಪ್ಪ ಅವರು ಮತ್ತೊಮ್ಮೆ ಸಿಎಂ ಆಗಬಾರದು, ಜಾತಿವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಈಗ ತನ್ನ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ