ಇಂದಿನಿಂದ ಹಾಸನಾಂಬೆಯ ದರ್ಶನಕ್ಕೆ ಬನ್ನಿ: ವಿಶೇಷ ಪಾಸ್ ದರ ಮಾಹಿತಿ ಇಲ್ಲಿದೆ

Krishnaveni K

ಗುರುವಾರ, 24 ಅಕ್ಟೋಬರ್ 2024 (08:48 IST)
Photo Credit: X
ಬೆಂಗಳೂರು: ಇಂದಿನಿಂದ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯದ ಗರ್ಭಗುಡಿ ಭಕ್ತರ ದರ್ಶನಕ್ಕಾಗಿ ತೆರೆಯಲಾಗುತ್ತಿದೆ. ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ವಿಶೇಷ ಪಾಸ್ ಕೂಡಾ ಲಭ್ಯವಿದೆ. ಇದರ ಮಾಹಿತಿ ಇಲ್ಲಿದೆ.

ಹಾಸನದ ಹಾಸನಾಂಬ ದೇವಾಲಯಕ್ಕೆ ಅದರದ್ದೇ ಆದ ಐತಿಹ್ಯವಿದೆ. ಇಲ್ಲಿ ವರ್ಷಕ್ಕೊಮ್ಮೆ ಮಾತ್ರ ಗರ್ಭಗುಡಿ ತೆರೆದು ದೇವಿಗೆ ಪೂಜೆ ಮಾಡಲಾಗುತ್ತದೆ. ಈ ಬಾರಿ ದಸರಾ ಹಬ್ಬದ ರೀತಿಯಲ್ಲಿ ದೀಪಾಲಂಕಾರ ಮಾಡಿ ಅದ್ಧೂರಿಯಾಗಿ ಹಾಸನಾಂಬ ದೇವಿಯ ಜಾತ್ರೆ ಮಾಡಲಾಗುತ್ತಿದೆ. ಇದಕ್ಕೆ ಸ್ಥಳೀಯಾಡಳಿತ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.

ಸಿಎಂ ಸಿದ್ದರಾಮಯ್ಯನವರಿಗೆ ಈಗಾಗಲೇ ಜಿಲ್ಲಾಡಳಿತ ವಿಶೇಷ ಆಹ್ವಾನವಿತ್ತಿದೆ. ಇಂದಿನಿಂದ ನವಂಬರ್ 3 ರವರೆಗೆ ದೇವಾಲಯ 24 ಗಂಟೆಯೂ ತೆರೆದಿರುತ್ತದೆ. ದಿನವಿಡೀ ದೇವಿಯ ದರ್ಶನಕ್ಕೆ ಬ್ಯಾರಿಕೇಡ್ ಗಳನ್ನು ಹಾಕಿ ಸಾಮಾನ್ಯ ಸಾಲು, ವಿಶೇಷ ಪಾಸ್ ಸಾಲು ಮತ್ತು ವಿಐಪಿಗಳಿಗೆ ಪ್ರತ್ಯೇಕ ಸಾಲು ಮಾಡಲಾಗಿದೆ.

ವಿಶೇಷ ಪಾಸ್ ಮೂಲಕ ನೇರವಾಗಿ ದೇವಿಯ ದರ್ಶನಕ್ಕೆ ತೆರಳಬಹುದು. ಇದಕ್ಕೆ 1000 ರೂ. ನಿಂದ 300 ರೂ.ವರೆಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ. ಇನ್ನು, ರಾಜಕೀಯ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರಿಗಾಗಿ ಪ್ರತ್ಯೇಕ ಸಾಲು ಮಾಡಲಾಗಿದೆ. ಈ ಬಾರಿ ಸುಮಾರು 20 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ