ಹಾಸನಾಂಬ ಜಾತ್ರೆಗೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ: ಯಾವಾಗಿನಿಂದ ಇಲ್ಲಿದೆ ವಿವರ

Krishnaveni K

ಗುರುವಾರ, 17 ಅಕ್ಟೋಬರ್ 2024 (09:53 IST)
ಬೆಂಗಳೂರು: ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯ ಜಾತ್ರೆಗೆ ಸಿಎಂ ಸಿದ್ದರಾಮಯ್ಯಗೆ ಜಿಲ್ಲಾಡಳಿತ ವತಿಯಿಂದ ಅಧಿಕೃತ ಆಹ್ವಾನ ನೀಡಲಾಗಿದೆ. ಹಾಸನಾಂಬ ದೇವಾಲಯ ತೆರೆಯುವ ದಿನಾಂಕ ಇತ್ಯಾದಿ ವಿವರ ಇಲ್ಲಿದೆ ನೋಡಿ.

ಹಾಸನಾಂಬ ದೇಗುಲವನ್ನು ವರ್ಷಕ್ಕೊಮ್ಮೆ ಮಾತ್ರ ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ. ಈ ಬಾರಿ ಅಕ್ಟೋಬರ್ 24 ರಿಂದ ನವೆಂಬರ್ 3ರ ವರೆಗೆ ನಡೆಯಲಿದೆ.  ಹಾಸನಾಂಬ ಜಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ  ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಆಹ್ವಾನ‌ ನೀಡಲಾಯಿತು.

ಸಂಸದರಾದ ಶ್ರೇಯಸ್ ಪಟೇಲ್ , ಶಾಸಕರಾದ ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮ , ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ, ಮುಖಂಡರಾದ ಹೆಚ್.ಕೆ.ಮಹೇಶ್  ಉಪಸ್ಥಿತರಿದ್ದರು.  ಈ ಬಾರಿಯೂ ಎಂದಿನಂತೇ ಲಕ್ಷಾಂತರ ಮಂದಿ ಹಾಸನಾಂಬ ದೇವಾಲಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಅತ್ಯಂತ ಕಾರಣಿಕ ದೇವಾಲಯ ಇದಾಗಿದ್ದು, ಜಾತ್ರೆಯ ಕೊನೆಯ ದಿನ ಮುಚ್ಚಲಾಗುವ ದೇವಾಲಯದ ಗರ್ಭಗುಡಿಯನ್ನು ಮುಂದಿನ ವರ್ಷ ಜಾತ್ರೆ ಸಂದರ್ಭದಲ್ಲಿಯೇ ತೆರೆಯಲಾಗುತ್ತದೆ. ಹಿಂದಿನ ವರ್ಷ ಹಚ್ಚಿಟ್ಟ ದೀಪ ಮುಂದಿನ ವರ್ಷದವರೆಗೂ ಹಾಗೆಯೇ ಉರಿಯುತ್ತಿರುತ್ತದೆ ಎನ್ನುವುದೇ ಇಲ್ಲಿಯ ವಿಶೇಷ. ಸಾರ್ವಜನಿಕರು ಮಾತ್ರವಲ್ಲದೆ, ಸಾಕಷ್ಟು ರಾಜಕೀಯ ಗಣ್ಯರು, ಸೆಲೆಬ್ರಿಟಿಗಳೂ ಇಲ್ಲಿಗೆ ಬಂದು ದೇವಿಯ ದರ್ಶನ ಪಡೆದು ತೆರಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ