ಅಮೆರಿಕದ ಪೆಸಿಫಿಕ್ ಮಹಾಸಾಗರದ ಮಧ್ಯಭಾಗದಲ್ಲಿರುವ ಹವಾಯಿ ಪ್ರಾಂತ್ಯದ ದ್ವೀಪಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ. ಅಮೆರಿಕದ ಹವಾಯಿಯಲ್ಲಿರುವ ಮಾಯಿ ಅರಣ್ಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ವೇಗವಾಗಿ ಅರಣ್ಯದ ತುಂಬೆಲ್ಲಾ ಹಬ್ಬುತ್ತಿದೆ. ಜನರನ್ನು ಸ್ಥಳಾಂತರಿಸುವ ಸಮಯದಲ್ಲಿ ಬೆಂಕಿಗೆ ಸಿಲುಕಿ ಲಾಹೈನಾ ಪಟ್ಟಣದಲ್ಲಿ ಕನಿಷ್ಠ 53 ಮಂದಿ ಸಾವನ್ನಪ್ಪಿದ್ದು, ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಕಾಡಿನಲ್ಲಿ ಕಾಣಿಸಿಕೊಂಡ ಭೀಕರ ಬೆಂಕಿಯಿಂದಾಗಿ 14,000 ಕ್ಕೂ ಹೆಚ್ಚು ಜನರನ್ನು ಮಾಯಿ ದ್ವೀಪದಿಂದ ಸ್ಥಳಾಂತರಿಸಲಾಗಿದೆ. ಲಹೈನಾದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ ಮತ್ತು ಮಾಯಿಯಲ್ಲಿ ಸುಮಾರು 11,000 ಜನರು ಕತ್ತಲೆಯಲ್ಲಿ ವಾಸಿಸುತ್ತಿದ್ದಾರೆ.ಅಂಗಡಿ ಮುಂಗಟ್ಟುಗಳು, ಮನೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲವೂ ನಾಶವಾಗಿವೆ. ತುಂಬಾ ಬೇಸಿಗೆ ಇರುವ ಕಾರಣ ಚಂಡಮಾರುತದ ಬಲವಾದ ಗಾಳಿಯಿಂದಾಗಿ ಇಡೀ ಕಾಡಿಗೆ ಬೆಂಕಿ ಹಬ್ಬಿತ್ತು.