ನಾನು ಸಿಎಂ ಆಗಬೇಕೆಂದಿರುವುದು ಇದೇ ಕಾರಣಕ್ಕೆ ಎಂದರು ಕುಮಾರಸ್ವಾಮಿ!
ಬೆಂಗಳೂರಿನ ಪದ್ಮನಾಭನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಕುಮಾರಸ್ವಾಮಿ, ಬಿಜೆಪಿ ಶಾಸಕ ಆರ್ ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು. ‘ಅಶೋಕ ಚಕ್ರವರ್ತಿ ಮೇಲೆ ಎಂದೂ ಐಟಿ ದಾಳಿ ನಡೆಯಲ್ಲ’ ಎಂದು ಆರ್ ಅಶೋಕ್ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಅಷ್ಟೇ ಅಲ್ಲದೆ ತಾವು ಸಿಎಂ ಆಗಲು ಬಯಸಿರುವುದರ ಕಾರಣವನ್ನೂ ಬಹಿರಂಗಪಡಿಸಿದ್ದಾರೆ. ‘ಎಲ್ಲರಿಗೂ ಸಮಾನ ಬದುಕು ಬೇಕಾಗಿದೆ. ಅಧಿಕಾರ ಮುಖ್ಯವಲ್ಲ. ಇದೇ ಕಾರಣಕ್ಕೆ ನಾನು ಮುಖ್ಯಮಂತ್ರಿಯಾಗಲು ಬಯಸಿರುವುದು’ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.