ಮೇ 15 ರ ನಂತರ ಜಾರ್ಜ್, ಬೇಗ್, ಹ್ಯಾರಿಸ್ ಇರಲ್ಲ: ಅಮಿತ್ ಶಾ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಈ ಎಲ್ಲಾ ಶಾಸಕರಿಗೆ ಜನರು ಮನೆ ದಾರಿ ತೋರಿಸಲಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.
ಈ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ಕೂಡಾ ಮನೆಗೆ ಹೋಗಬೇಕಾಗುತ್ತದೆ. ಬೆಂಗಳೂರನ್ನು ಹಾಳು ಮಾಡಿರುವ ಬೇಗ್, ಜಾರ್ಜ್, ಹ್ಯಾರಿಸ್ ರನ್ನು ಜನರೇ ಮನೆಗೆ ಕಳುಹಿಸುತ್ತಾರೆ. ಬಿಜೆಪಿ ನೇತೃತ್ವದಲ್ಲಿ ಸ್ವಚ್ಛ್ ಬೆಂಗಳೂರು ಸ್ಥಾಪನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.