ಸಿದ್ದರಾಮಯ್ಯ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಬಿಡುಗಡೆಗೊಳಿಸಿದ ವಿಡಿಯೋದಲ್ಲೇನಿದೆ (ವಿಡಿಯೋ)

Krishnaveni K

ಶನಿವಾರ, 28 ಸೆಪ್ಟಂಬರ್ 2024 (14:50 IST)
ಬೆಂಗಳೂರು: ತಮ್ಮ ವಿರುದ್ಧ ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣವನ್ನು ಎಳೆದು ತಂದಿರುವ ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಇಂದು ಪತ್ರಿಕಾಗೋಷ್ಠಿ ನಡೆಸಿ ಹರಿಹಾಯ್ದಿದ್ದಾರೆ. ಜೊತೆಗೆ ಸಿದ್ದರಾಮಯ್ಯ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಇಂದಿನ ಅವರ ಧೋರಣೆಯನ್ನು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ತಮ್ಮ ಮೇಲೆ ಮುಡಾ ಹಗರಣಕ್ಕೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದರ ಬಗ್ಗೆ ಕೆಂಡ ಕಾರಿದ್ದರು. ರಾಜ್ಯಪಾಲರು ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಪಾಠ ಮಾಡಿದ್ದರು. ಇದಕ್ಕೆ ಈಗ ಕುಮಾರಸ್ವಾಮಿ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ.

2011 ರಲ್ಲಿ ಸಿದ್ದರಾಮಯ್ಯ ರಾಜ್ಯಪಾಲರ ಅಧಿಕಾರದ ಬಗ್ಗೆ ಮಾತನಾಡಿರುವ ವಿಡಿಯೋ ಬಿಡುಗಡೆ ಮಾಡಿರುವ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕರಾಗಿದ್ದಾಗ ಒಂದು ಧೋರಣೆ, ಆಡಳಿತದಲ್ಲಿದ್ದಾಗ ಒಂದು ಧೋರಣೆಯೇ ಎಂದು ಪ್ರಶ್ನೆ ಮಾಡಿದ್ದಾರೆ. 2011 ರಲ್ಲಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ರಾಜ್ಯಪಾಲರು ಸರ್ಕಾರ ತಪ್ಪು ಮಾಡುತ್ತಿದೆ ಎನಿಸಿದಾಗ ಪ್ರಶ್ನೆ ಮಾಡುವ ಅಧಿಕಾರವಿದೆ ಎಂದಿದ್ದರು. ಈಗ ತಾವು ಅಧಿಕಾರಕ್ಕೇರಿದಾಗ ರಾಜ್ಯಪಾಲರು ಹಸ್ತಕ್ಷೇಪ ಮಾಡಬಾರದು ಎನ್ನುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

ಸಿದ್ದರಾಮಯ್ಯ ಅವರೇ ನಿಮಗೆಷ್ಟು ನಾಲಿಗೆ..?

ವಿರೋಧ ಪಕ್ಷದಲ್ಲಿದ್ದಾಗ ಒಂದು ನಾಲಿಗೆ...
ಆಡಳಿತ ನಡೆಸುವಾಗ ಒಂದು ನಾಲಿಗೆಯೇ...?

ರಾಷ್ಟ್ರಪತಿಗಳು ಸಂವಿಧಾನದ ಮುಖ್ಯಸ್ಥರು, ಅವರ ಪ್ರತಿನಿಧಿಗಳಾಗಿ ರಾಜ್ಯಾಪಾಲರು ಪ್ರತಿಯೊಂದು ರಾಜ್ಯದಲ್ಲಿ ಕೆಲಸ ಮಾಡುತ್ತಾರೆ. ಒಂದು ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದೆಯಾ ಎಂಬ… pic.twitter.com/hhEjL0264c

— Janata Dal Secular (@JanataDal_S) September 28, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ