ದೇವಸ್ಥಾನ ಸುತ್ತುವುದನ್ನು ಫೋಟೋ ತೆಗೆದ ಮಾಧ್ಯಮಗಳ ಮೇಲೆ ಎಚ್ ಡಿ ರೇವಣ್ಣ ಸಿಟ್ಟು
ಇದೇ ವೇಳೆ ರೇವಣ್ಣ ಟೆಂಪಲ್ ರನ್ ಮುಂದುವರಿಸಿರುವ ಬಗ್ಗೆ ಮಾಧ್ಯಮಗಳು ಫೋಟೋ ತೆಗೆಯಲು ಮುಂದಾದಾಗ ಸಿಟ್ಟಿಗೆದ್ದು ಫೋಟೋ ಅಳಿಸಿ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಿದ ಘಟನೆ ಕಟೀಲು ದೇವಾಲಯದಲ್ಲಿ ನಡೆದಿದೆ. ಮಾಧ್ಯಮಗಳ ವಿರುದ್ಧ ಸಿಟ್ಟಿಗೆದ್ದ ರೇವಣ್ಣ ದೇವಾಲಯದಲ್ಲಿ ತಾವು ಪ್ರಸಾದ ಸ್ವೀಕರಿಸುತ್ತಿರುವ ಫೋಟೋ ಅಳಿಸಿ ಹಾಕಲು ಅಲ್ಲಿದ್ದ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.