HDKಯನ್ನು BJPಯವರು ನೆನೆಯಬೇಕು
ಮಾಜಿ ಸಿಎಂ H.D. ಕುಮಾರಸ್ವಾಮಿಯನ್ನು ಬಿಜೆಪಿಯವರು ನೆನೆಯಬೇಕು ಎಂದು ಸುವರ್ಣಸೌಧದಲ್ಲಿ JDS ಶಾಸಕ ಅನ್ನದಾನಿ ಹೇಳಿದ್ದಾರೆ. ಎಲ್ಲೋ ಇದ್ದವರನ್ನ ಅಧಿಕಾರಕ್ಕೆ ತಂದವರು HDK. ಯಾರೇ ದಂಡೆತ್ತಿ ಬರ್ಲಿ ರಾಮನಗರ, ಮಂಡ್ಯ ದೇವೇಗೌಡರ ಭದ್ರಕೋಟೆ ಎಂದು ಹೇಳಿದ್ದಾರೆ. ದೇವೇಗೌಡರ ಭದ್ರಕೋಟೆಯನ್ನ ಅಲ್ಲಾಡಿಸೋಕೆ ಆಗಲ್ಲ ಎಂದು BJP ವಿರುದ್ಧ JDS ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ. ನಾವೇನು ಕ್ರಿಶ್ವಿಯನ್ನರಾ, ಮುಸ್ಲಿಮರಾ? ನಾವು ಹಿಂದೂಗಳೇ, ಗೌಡರು ಹಿಂದೂಗಳೇ ಎಂದು ಹೇಳಿದ್ರು. ಮೊದಲು ಜಾತಿವ್ಯವಸ್ಥೆಯನ್ನು ಕಿತ್ತು ಹಾಕಿ. ನಿಮ್ಮಕೆಲಸ ಮಾಡೋಕೆ ದಲಿತರು ಬೇಕು. ಕುಂಬಾರ, ಚಮ್ಮಾರರು ನಿಮಗೆ ಬೇಕು. ಅವರಿಗೆ ಮೊದಲು ಸಾಮಾಜಿಕ ನ್ಯಾಯ ಕೊಡಿ. ಯೋಗಿನಾದ್ರೂ ಕರೆತನ್ನಿ, ಜೋಗಿಯನ್ನಾದ್ರೂ ಕರೆತನ್ನಿ. ಅದಕ್ಕೆಲ್ಲ ದೇವೇಗೌಡರು ಸೊಪ್ಪು ಹಾಕಲ್ಲ ಎಂದು ಕಿಡಿಕಾರಿದ್ರು.