ಅವನು ಸಿಪಿವೈ ಅಲ್ಲ, ಸಿಡಿ ಯೋಗೇಶ್ವರ್- ಸಿ.ಪಿ.ಯೋಗೇಶ್ವರ್ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ
ಶುಕ್ರವಾರ, 15 ಜನವರಿ 2021 (12:08 IST)
ಹುಬ್ಬಳ್ಳಿ : ಸಿ.ಪಿ.ಯೋಗೇಶ್ವರ್ ಅವನು ಸಿಪಿವೈ ಅಲ್ಲ, ಸಿಡಿ ಯೋಗೇಶ್ವರ್ ಎಂದು ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟನನ್ನು ಮಂತ್ರಿ ಮಾಡಿದ್ದಕ್ಕೆ ನನ್ನ ವಿರೋಧವಿದೆ. ಸರ್ಕಾರ ಬರಲು ಯೋಗೀಶ್ವರ್ ಕಾರಣನಲ್ಲ. ಬಾಂಬೆಯಲ್ಲಿ ಚೀಲ ಹಿಡಿದು ಓಡಾಡ್ತಿದ್ದ. ಯಡಿಯೂರಪ್ಪ ಅಸಹಾಯಕರಾಗಿದ್ದಾರೆ. ವಿಜಯೇಂದ್ರ ಅಣತಿಯಂತೆ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಹಾಗೇ ಸಾ.ರಾ.ಮಹೇಶ್ ಕೊಚ್ಚೆಗುಂಡಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಕೊಚ್ಚೆಗೆ ಕಲ್ಲೆಸೆದು ನಾನೇಕೆ ಹೊಲಸಾಗಲಿ. ಸಿದ್ದಾಂತಕ್ಕಾಗಿ ರಾಜಕೀಯ ಮಾಡಲು ಆಗಲ್ಲ. ಅಧಿಕಾರದ ಆಸೆ ಇಲ್ಲ ಅಂತ ನಾನು ಹೇಳಲ್ಲ. ಅಧಿಕಾರ ಇಲ್ಲದೆ ಏನು ಮಾಡಲು ಸಾಧ್ಯ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.