ಬಡವರ ಕಾರ್ಯಕ್ರಮಕ್ಕೆ ತೊಂದರೆ ಕೊಡಬೇಕು ಅಂತಿದ್ದಾರೆ- ಸಿಎಂ

ಶನಿವಾರ, 24 ಜೂನ್ 2023 (20:00 IST)
ಅಕ್ಕಿ ಇಟ್ಟುಕೊಂಡು ಕೊಡ್ತಿಲ್ಲ.ಖಾಸಗಿಯವರಿಗೆ ಕೊಡ್ತಿದ್ದಾರೆ.ನಾವು ಪುಕ್ಕಟ್ಟೆ ಕೇಳುತ್ತಿಲ್ಲ.ಹಣ ಕೊಡ್ತೀವಿ ಅಂದ್ರೂ ಕೊಡುತ್ತಿಲ್ಲ.ಯಾವ ಉದ್ದೇಶದಿಂದ ಕೊಡ್ತಿಲ್ಲ.ಇವರನ್ನ ಬಡವರ ವಿರೋಧಿ ಅಂತ ಕರೆಯಬೇಕಾ ಅಥವಾ ಬಡವರ ಪರ ಅಂತ ಕರೆಯಬೇಕಾ.ಜನರು ಯೋಚನೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಯಡಿಯೂರಪ್ಪನವರಿಗೆ ಯಾವ ನೈತಿಕ ಹಕ್ಕಿದೆ ಪ್ರತಿಭಟನೆ ಮಾಡೋಕೆ ಜುಲೈ 1 ರಿಂದ ವಿದ್ಯುತ್ ಕೊಡ್ತಿದೇವೆ.ಅಕ್ಕಿ ಕೊಡಲು ತೀರ್ಮಾನ ಮಾಡಿದ್ವಿ, ಆದರೆ ಅಕ್ಕಿ ಸಿಕ್ತಿಲ್ಲ.ತೆಲಂಗಾಣದವರು ಭತ್ತ ಕೊಡ್ತೀವಿ ಎಂದು,ಛತ್ತೀಸಗಡದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡ್ತಿವಿ ಅಂತಾರೆ.ಪಂಜಾಬ್ ನವರು ನವೆಂಬರ್‌ನಿಂದ ಕೊಡ್ತೀವಿ ಅಂತಾರೆ.ಹೀಗಾಗಿ NCCF ಕೇಂದ್ರಿಯ ಭಂಡಾರ, ನಫೆಡ್ ನಿಂದ ಕೊಟೆಷನ್ ಕೇಳಿದ್ದೇವೆ.ಅವರು ಕೊಟ್ಟ ಬಳಿಕ ದರ, ಗುಣಮಟ್ಟ, ಪ್ರಮಾಣ ವನ್ನ ನೋಡಿಕೊಂಡು ತೀರ್ಮಾನ ಮಾಡ್ತೀವಿಮಓಪನ್ ಮಾರ್ಕೆಟ್ ನಿಂದ ಖರೀದಿ ಮಾಡಬೇಕು ಟೆಂಡರ್ ಕರೆಯಬೇಕಾಗುತ್ತೆ ಅದಕ್ಕೆ ಸಮಯ ಆಗುತ್ತೆ.ರಾಗಿ, ಜೋಳ ಎರಡೆರಡು ಕೆ ಜಿ ಕೊಡಬಹುದು, ಆದರೆ ಇನ್ನು 3 ಕೆ ಜಿ ಅಕ್ಕಿ ಕೊಡಬೇಕಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ
 
ರಾಜ್ಯದಲ್ಲಿ ಮಳೆ ಕೊರತೆ ವಿಚಾರವಾಗಿ ಮಳೆ ಬರ್ತಿದೆ,ನಿನ್ನೆಯಿಂದ ಬರ್ತಿದೆ.ವ್ಯಾಪಕವಾಗಿ ಬರ್ತಿಲ್ಲ ಅಷ್ಟೇ,ಒಂದು ವೇಳೆ ಸಮಸ್ಯೆಯಾದ್ರೆ, ಎಲ್ಲ ಸಮಸ್ಯೆಯನ್ನ ಎದುರಿಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕಿದೆ.ಮಳೆ ಬರಲಿ ಎಂದು ಪ್ರಾರ್ಥನೆ ಮಾಡ್ತಿದ್ದೇವೆ.ಬಿತ್ತನೆ ಕೆಲವೆಡೆ ಶುರುವಾಗಿದೆ ಕೆಲವು ಕಡೆಯಾಗಿಲ್ಲ.ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ‌ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ