ಕೊರೋನಾ ನಿಯಂತ್ರಣಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ನೆರವು ಕೇಳಿದ ಆರೋಗ್ಯ ಸಚಿವ
ಯುವರತ್ನ, ರಾಬರ್ಟ್ ಸಿನಿಮಾ ತಂಡಗಳ ಸಿನಿಮಾ ಪ್ರಚಾರದ ಕಾರ್ಯಕ್ರಮಗಳ ಬೆನ್ನಲ್ಲೇ ಸಚಿವ ಸುಧಾಕರ್ ಇಂತಹದ್ದೊಂದು ಮನವಿ ಮಾಡಿರುವುದು ಉಲ್ಲೇಖನೀಯ. ಸ್ಟಾರ್ ನಟರನ್ನು ನೋಡಲು ಸಾವಿರಾರು ಜನ ಸೇರುತ್ತಾರೆ, ಸಾಮಾಜಿಕ ಅಂತರ ಮರೆತು ನೂಕು ನುಗ್ಗಲು ನಡೆಸುತ್ತಿದ್ದಾರೆ. ಇದರ ಬಗ್ಗೆ ಸುಧಾಕರ್ ಪರೋಕ್ಷವಾಗಿ ಈ ಹೇಳಿಕೆ ನೀಡಿರಬಹುದು ಎನ್ನಲಾಗಿದೆ.