ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ

ಸೋಮವಾರ, 31 ಜುಲೈ 2023 (14:36 IST)
ಆರೋಗ್ಯ ಸಚಿವ  ಗುಂಡೂರಾವ್ ಇಂದು ಜಯನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್  ಭೇಟಿ ನೀಡಿದ್ರು.ಒಂದು ತಿಂಗಳಿಂದ ಆಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಸಿಬ್ಬಂದಿ ಇಲ್ಲದೇ ಕ್ಲೋಸ್ ಆಗಿತ್ತು.ಸಿಬ್ಬಂದಿಗೆ ಕಿರುಕುಳ ಆರೋಪ ಹೀಗೆ ಇತ್ತೀಚಿಗೆ ಸಾಕಷ್ಟು ಕುಖ್ಯಾತಿ ಆಸ್ಪತ್ರೆ ಗಳಿಸಿತ್ತು.ಈ ಹಿನ್ನಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
 
ಆಸ್ಪತ್ರೆ ಸಿಬ್ಬಂದಿಯಿಂದ ಸಚಿವರು ಮಾಹಿತಿ ಪಡೆದ್ರು.ವೈದ್ಯಾಧಿಕಾರಿಗಳಿಗೆ ಸಚಿವರು ತರಾಟೆ ತೆಗೆದುಕೊಂಡಿದ್ದಾರೆ.ಆಸ್ಪತ್ರೆಯ ಮೇಲೆ ಸಾಕಷ್ಟು ದೂರಿದೆ .ಮತ್ತೆ ಈ ರೀತಿ ಕಂಪ್ಲೈಂಟ್ ಬರಬಾರದು ಅಂತಾ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ