ಕೆಜಿಎಫ್ ಸಂಭ್ರಮ್ ನಿಂದ ಭಾರೀ ದೋಖಾ

ಮಂಗಳವಾರ, 15 ಅಕ್ಟೋಬರ್ 2019 (15:58 IST)
ಕೆಜಿಎಫ್ ಸಂಭ್ರಮ್ ನಿಂದ ನೂರಾರು ವಿದ್ಯಾರ್ಥಿಗಳಿಗೆ ಭಾರೀ ದೋಖಾ ಆಗಿರೋ ಆರೋಪ ಕೇಳಿಬಂದಿದೆ.

ರಾಜ್ಯದ ಮತ್ತೊಂದು ಮೆಡಿಕಲ್ ಕಾಲೇಜು ವಂಚನೆಯ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆಯಲ್ಲಿನ ಈ ಮೆಡಿಕಲ್ ಕಾಲೇಜು ನೂರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದೆ. ಈ ಮೆಡಿಕಲ್ ಕಾಲೇಜ್‍ ನವರು ಕೊಟ್ಟ  ದುಡ್ಡಿಗೆ ಕೈಯೊಡ್ಡಿದ ಸರ್ಕಾರಿ ಅಧಿಕಾರಿಗಳು, ಮುಗ್ಧ ವಿದ್ಯಾರ್ಥಿಗಳ ಬದುಕಿಗೆ ಕೊಳ್ಳಿಯಿರಿಸಿದ್ದಾರೆ.   ಕೋಲಾರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜೊಂದು ನೂರಿಪ್ಪತ್ತು ವಿದ್ಯಾರ್ಥಿಗಳನ್ನು ಅಕ್ಷರಶಃ ಬೀದಿಗೆ ತಳ್ಳಿದೆ. 

ಕೋಲಾರದ ಕೆಜಿಎಫ್ ನಗರದಲ್ಲಿ ಸಂಭ್ರಮ್ ಮೆಡಿಕಲ್ ಕಾಲೇಜಿದೆ. ಮೂರು ವರ್ಷಗಳ ಹಿಂದೆ ಶುರುವಾದ ಈ ಮೆಡಿಕಲ್ ಕಾಲೇಜಿಗೆ ಇದುವರೆಗೂ ಭಾರತೀಯ ವೈದ್ಯಕೀಯ ಮಂಡಳಿಯ ಮಾನ್ಯತೆಯೇ ಸಿಕ್ಕಿಲ್ಲ.

ಆದರೂ ಕೂಡಾ ಎಲ್ಲ ಸೌಕರ್ಯಗಳನ್ನು ಒದಗಿಸುವುದಾಗಿ ಈ ಮೆಡಿಕಲ್ ಕಾಲೇಜಿನವರಿಂದ ಕೇವಲ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು 2016-2017 ರಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿಯನ್ನು ಕೊಡಲಾಯ್ತು. ಇದರನ್ವಯ ಸಿಇಟಿ, ಕಾಮೆಡ್-ಕೆ ಹಾಗೂ ಮ್ಯಾನೇಜ್‍ಮೆಂಟ್ ಖೋಟಾದಲ್ಲಿ ಬರೋಬ್ಬರಿ 120 ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಕೊಟ್ಟಾಯ್ತು. ಅಲ್ಲಿಂದಾಚೆಗೆ ಶುರುವಾದ ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ಬದುಕು ಅಕ್ಷರಶಃ ನರಕವಾಗಿದೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ