ಉಕ್ಕಿ ಹರಿಯುತ್ತಿರುವ ನೇತ್ರಾವತಿ: ಅಪಾಯದಲ್ಲಿ ಕರಾವಳಿಯಲ್ಲಿ ಜನರ ಬದುಕು

ಶನಿವಾರ, 10 ಆಗಸ್ಟ್ 2019 (11:13 IST)
ಮಂಗಳೂರು: ವರುಣನ ಆರ್ಭಟ ಮುಂದುವರಿದಿದ್ದು, ನೇತ್ರಾವತಿ ನದಿ ಅಪಾಯದ ಮಟ್ಟ ತಲುಪಿದ್ದು, ಮಂಗಳೂರು ಸೇರಿದಂತೆ ಕರಾವಳಿ ಜನರ ಬದುಕು ಅಪಾಯದಲ್ಲಿದೆ.


ಮಂಗಳೂರು ಬಂದರೂ ಅಪಾಯದಲ್ಲಿದ್ದು, ಬೋಟುಗಳು ಮುಳುಗಡೆಯಾಗುವ ಅಪಾಯದಲ್ಲಿದೆ. ನೇತ್ರಾವತಿ ನದಿ ದಂಡೆಯ ಸುತ್ತಮುತ್ತಲ ಗ್ರಾಮಗಳು ಮುಳುಗಡೆ ಭೀತಿಯಲ್ಲಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಸ್ನಾನ ಘಟ್ಟ ಮುಳುಗಡೆಯಾಗಿದ್ದು, ನೀರಿನ ಹರಿವು ಹೆಚ್ಚಿದೆ. ಇದುವರೆಗೆ ಕರಾವಳಿಯಲ್ಲಿ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೇರಿದೆ. ಉತ್ತರ ಕರ್ನಾಟಕದ ನಂತರ ಇದೀಗ ಕರ್ನಾಟಕದ ದಕ್ಷಿಣ ಭಾಗದಲ್ಲಿ ಜನ ಜೀವನ ದುಸ್ತರವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ