ಬೆಂಗಳೂರಿನಲ್ಲಿ ಮುಂದಿನ 4 ವಾರ ಭಾರೀ ಮಳೆ ಎಚ್ಚರಿಕೆ

ಗುರುವಾರ, 27 ಜುಲೈ 2023 (16:50 IST)
ರಾಜಧಾನಿಯಲ್ಲಿ ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೇ ಜಿಟಿ ಜಿಟಿ ಮಳೆಯಾಗ್ತಿದೆ.ಪ್ರತಿ ವರ್ಷದಂತೆ ಆಗಸ್ಟ್, ಸೆಪ್ಟೆಂಬರ್​ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮುಂದಿನ ನಾಲ್ಕು ವಾರ ಕರಾವಳಿ, ಮಲೆನಾಡಲ್ಲಿ ವಾಡಿಕೆಗಿಂತ ನಿತ್ಯ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.ಉತ್ತರ ಒಳನಾಡಲ್ಲಿ ಅನೇಕ ಜಿಲ್ಲೆಗಳಿಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ.ಚಾಮರಾಜನಗರ, ಬೆಂಗಳೂರು, ರಾಮನಗರ, ಮಂಡ್ಯ, ಕೊಡಗಲ್ಲಿ ವಾಡಿಕೆಯಂತೆ ಮಳೆ ನಿರೀಕ್ಷೆ ಇದೆ.ಆ.4 ರಿಂದ 10ರ ವರೆಗೆ ವಾಡಿಕೆಗಿಂತ ತುಸು ಕಡಿಮೆ ಮಳೆಯಾಗುವ ಸಾಧ್ಯತೆ ಇದೆ.ಆ. 10ರಿಂದ 17ರವರೆಗೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.ಉಳಿದ ಜಿಲ್ಲೆಗಳಲ್ಲಿ ವಾಡಿಕೆಗಿಂತ ತುಸು ಕಡಿಮೆ ಮಳೆ ಸಾಧ್ಯತೆ ಇದೆ.
 
ಬೆಂಗಳೂರು: 25-19, ಚಿಕ್ಕಬಳ್ಳಾಪುರ: 23-18, ಕೋಲಾರ: 27-20, ಬೆಂಗಳೂರು ಗ್ರಾಮಾಂತರ:25-19, ತುಮಕೂರು: 25-19, ಚಿತ್ರದುರ್ಗ: 24-20, ಹಾವೇರಿ: 24-21, ದಾವಣಗೆರೆ: 24-21, ಹುಬ್ಬಳ್ಳಿ: 24-21, ಗದಗ: 24-21, ಕೊಪ್ಪಳ: 26-22, ಬಾಗಲಕೋಟೆ: 24-22, ವಿಜಯಪುರ: 24-22
 
ರಾಮನಗರ: 27-21, ಮಂಡ್ಯ: 27-21, ಮೈಸೂರು: 26-21, ಹಾಸನ: 23-19, ಮಡಿಕೇರಿ: 19-17, ಚಿಕ್ಕಮಗಳೂರು: 21-18, ದಕ್ಷಿಣ ಕನ್ನಡ: 27-24, ಶಿವಮೊಗ್ಗ: 24-21, ಬೆಳಗಾವಿ: 23-21, ಉಡುಪಿ: 27-24, ಉತ್ತರ ಕನ್ನಡ: 27-26, ಬೀದರ್: 23-21, ಕಲಬುರಗಿ: 24-22, ಯಾದಗಿರಿ: 25-23, ರಾಯಚೂರು: 25-23 ಮತ್ತು ಬಳ್ಳಾರಿ: 26-22

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ