15 ವರ್ಷಗಳ ಬಳಿಕ ಸುರಿದ ಭರ್ಜರಿ ಮಳೆ: ನೆರೆ ಭೀತಿ

ಮಂಗಳವಾರ, 10 ಜುಲೈ 2018 (15:36 IST)
ಆ ಸುಕ್ಷೇತ್ರದಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಮಳೆ ಈಗ ಆಗುತ್ತಿದೆ. ಭಾರಿ ಮಳೆಗೆ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ನೆರೆ ಭೀತಿಯಲ್ಲಿ ಜನರು ಭಯಭೀತರಾಗಿದ್ದಾರೆ.
 
ವರುಣನ ಆರ್ಭಟ ಮುಂದುವರಿದಿರುವಂತೆ ರಾಜ್ಯದ ಹಲವೆಡೆ ನೆರೆ ಪರಿಸ್ಥಿತಿ ತಲೆದೋರಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನೆರೆ ಭೀತಿ ಜನರನ್ನು ಆವರಿಸಿದೆ. ಕಳೆದ 15 ವರ್ಷಗಳಿಂದ ಇಂತಹ ಮಳೆಯನ್ನು ಶೃಂಗೇರಿಗರು ಕಂಡಿಲ್ಲ. ನಿರಂತರವಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಜನರನ್ನು ಸಂಕಷ್ಟಕ್ಕೆ ನೂಕಿದೆ.

ರಸ್ತೆಗಳೆಲ್ಲ ಕೆರೆಗಳಾಗಿ ನಿಂತಿವೆ. ಇಲ್ಲಿನ ಗಾಂಧಿ ಮೈದಾನಕ್ಕೂ ಭಾರಿ ಪ್ರಮಾಣದ ನೀರು ನುಗ್ಗಿದೆ. ಜಮೀನುಗಳಿಗೆ ನೀರು ನುಗ್ಗಿರುವುದರಿಂದ ರೈತರು ಪರದಾಡುವಂತೆ ಆಗಿದೆ. ತುಂಗಾ ಹಾಗೂ ಭದ್ರಾ ನದಿ ಪಾತ್ರದ ಜನರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ