ಕೊರೊನಾ ಹೆಮ್ಮಾರಿ ಕಾಟ ಕಡಿಮೆಯಾಗಿ ಸಾರ್ವಜನಿಕರ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ಜನರು ನಿಟ್ಟುಸಿರು ಬಿಟ್ಟಿದ್ರು. ಆದ್ರೆ ಇದೀಗ ಕೊರೊನಾ ಮುಗಿದ್ರು ಅದರ ಸೈಡ್ ಎಫ್ಫೆಕ್ ದೂರವಾಗ್ತಿಲ್ಲ, ಹೀಗಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ.ಕೊರೊನಾ ಸಂಕಷ್ಟ ಬಹುತೇಕ ಮುಗಿದಿದು , ಸರ್ಕಾರ ಕೂಡ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದೆ. ಜನರು ಕೂಡ ಮೊದಲಿನಂತೆ ತಮ್ಮ ಜೀವನ ಕಟ್ಟಿಕೊಳ್ಳುವ ಕಡೆಗೆ ಗಮನಹರಿಸಿದ್ದಾರೆ. ಇದೀಗ ಕರ್ನಾಟಕ ಟೆಕ್ನಿಕಲ್ ಪ್ಯಾನಲ್ ನಿಂದ ಎಚ್ಚರಿಕೆಯೊಂದು ರವಾನೆಯಾಗಿದೆ.ಈ ವರ್ಷದ ಅಂತ್ಯದವರೆಗೂ ಮಾಸ್ಕ್ ಧರಿಸುವಂತೆ ಎಲ್ಲಾರಿಗೂ ಎಚ್ಚರಿಕೆ ನೀಡಿದ್ದಾರೆ.ಕೊರೊನಾ ಕಡಿಮೆಯಾಗುತ್ತಿದೆ ಎಂದು ಜನರೂ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ .ಕೊರೊನಾ ಕಡಿಮೆಯಾದರೂ ಕೂಡ ಮಾಸ್ಕ್ ಧರಿಸಲೇಬೇಕೆಂದು ಎಚ್ಚರಿಕೆ ನೀಡಿದ್ದಾರೆ.