ಬೆಂಗಳೂರು : ದೇಶದಲ್ಲಿ ಇಂದು 2,300 ಕ್ಕೂ ಹೆಚ್ಚು ಕೊರೊನಾ ಪ್ರಕರಣ ವರದಿಯಾಗಿದೆ.
ಇತ್ತ ರಾಜ್ಯದಲ್ಲಿಯೂ ಕೊರೊನಾ ಟೆನ್ಶನ್ ಮತ್ತೆ ಶುರುವಾದಂತಿದೆ. ಹೌದು. ರಾಜ್ಯದಲ್ಲಿ ಪಾಸಿಟಿವಿಡ್ ರೇಟ್ ನಲ್ಲಿ ಏರಿಕೆ ಕಂಡುಬರುತ್ತಿದ್ದು, ಹೊರರಾಜ್ಯಗಳಲ್ಲಿ ನಿಧಾನವಾಗಿ ಪಾಸಿಟಿವಿಟಿ ರೇಟ್ ಹೆಚ್ಚುತ್ತಿದೆ.
ಈಗ ಕರ್ನಾಟಕದಲ್ಲಿ ಕೊರೊನಾ ಪ್ರಮಾಣ ಹೆಚ್ಚಳವಾಗುತ್ತಿದೆ. ಶೇ.0.50, ಶೇ.0.80 ಇದ್ದ ಪಾಸಿಟಿವಿಟಿ ರೇಟ್ ಶೇ1 ಕ್ಕಿಂತ ಹೆಚ್ಚಳವಾಗಿದೆ. ಇತ್ತ ಬೆಂಗಳೂರಿನಲ್ಲಿಯೂ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಶೇ.52ರ ಸನಿಹಕ್ಕೆ ಪಾಸಿಟಿವಿಟಿ ರೇಟ್ ಇದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 100 ಹೊಸ ಪ್ರಕರಣಗಳು ವರದಿಯಾಗಿದೆ. 49 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು ಕೂಡ ರಾಜ್ಯದಲ್ಲಿ ಯಾರೂ ಕೊರೊನಾದಿಂದ ಸಾವನ್ನಪ್ಪಿಲ್ಲ.
ಒಂದಿನ ಪಾಸಿಟಿವಿಟಿ ರೇಟ್ ಶೇ.1.02 ಇದೆ. 9,714 ಮಂದಿಯನ್ನು ಇಂದು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಮೂಲಕ ಇಲ್ಲಿಯವರೆಗೆ ಒಟ್ಟು 6,57,88,539 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.