ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರವಾಗಿ ನೆಲೆಸಲು ಸೂರ್ಯಾಸ್ತ ನಂತರ ಈ ನಿಯಮಗಳನ್ನು ತಪ್ಪದೆ ಪಾಲಿಸಿ

ಮಂಗಳವಾರ, 5 ಫೆಬ್ರವರಿ 2019 (09:47 IST)
ಬೆಂಗಳೂರು : ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿದರೆ ಮಾತ್ರ ಆ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ, ಸಂಪತ್ತು ತುಂಬಿರುತ್ತದೆ. ಆದ್ದರಿಂದ ಲಕ್ಷ್ಮೀ ದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸಿರಬೇಕೆಂದರೆ ಸೂರ್ಯಾಸ್ತ ನಂತರಈ ನಿಯಮಗಳನ್ನು ತಪ್ಪದೆ ಪಾಲಿಸಿ.


ಸೂರ್ಯಾಸ್ತದ ನಂತ್ರ ನಿಯಮಿತವಾಗಿ ತುಳಸಿ ಗಿಡದ ಬಳಿ ದೀಪ ಹಚ್ಚಬೇಕು. ಪ್ರತಿ ಬಾರಿ ಕೆಲಸದಲ್ಲಿ ಅಡ್ಡಿಯಾಗ್ತಿದ್ದರೆ ಇದನ್ನು ದೂರ ಮಾಡಲು ಹನುಮಂತನ ಮುಂದೆ ಸಾಸಿವೆ ಎಣ್ಣೆ ದೀಪ ಹಚ್ಚಬೇಕು. ಸೂರ್ಯಾಸ್ತದ ನಂತರ ಪ್ರತಿದಿನ ಮನೆಯಲ್ಲಿ ಕರ್ಪೂರವನ್ನು ಹಚ್ಚಬೇಕು. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ನೆಲೆಸುತ್ತದೆ.


ಅದೇರೀತಿ ಸೂರ್ಯಾಸ್ತದ ನಂತರ ಗೇಟ್ ಮುಂದೆ ಯಾವುದೇ ರೀತಿಯ ಕಸ ಸಂಗ್ರಹವಾಗದಂತೆ ನೋಡಿಕೊಳ್ಳಿ. ಒಂದು ವೇಳೆ ಮುಖ್ಯ ದ್ವಾರದ ಮುಂದೆ ಕಸವಿದ್ದರೆ ತಕ್ಷಣ ತೆಗೆಯಿರಿ. ಸಂಜೆಯಾಗ್ತಿದ್ದಂತೆ ಹಾಲು-ಮೊಸರು ಹಾಗೆ ಈರುಳ್ಳಿಯನ್ನು ಬೇರೆಯವರಿಗೆ ನೀಡಬೇಡಿ. ಇದು ಅಶುಭ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ