ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದವರ ಅನುಭವ ಹಂಚಿಕೊಳ್ಳಲು ಇಲ್ಲಿದೆ “ಆಶಾ ವೇದಿಕೆ”

ಶುಕ್ರವಾರ, 22 ಅಕ್ಟೋಬರ್ 2021 (18:40 IST)
ಬೆಂಗಳೂರು: ಮೊಣಕಾಲು ಶಸ್ತçಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ರೋಗಿಗಳ ಆತ್ಮಸ್ಥೈರ್ಯ ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಫೋರ್ಟಿಸ್ ಆಸ್ಪತ್ರೆ ವತಿಯಿಂದ “ಆಶಾ” ಎಂಬ ವಿಶೇಷ ಕಾರ್ಯಕ್ರಮ ನಡೆಸಲಾಯಿತು.
 
ಮೊಣಕಾಲು ಶಸ್ತ್ರಚಿಕಿತ್ಸೆಗೂ ಮೊದಲು ಆ ನಂತರದ ಜೀವನದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದಕ್ಕೆ ಚಾಲನೆ ನೀಡಿ ಮಾತನಾಡಿದ ಆರ್ಥೋಪೆಡಿಕ್ಸ್ ವಿಭಾಗದ ಡಾ. ನಾರಾಯಣ್ ಹಲ್ಸ್, ವಯಸ್ಸಾದ ಬಳಿಕ ಅತಿ ಮೊಣಕಾಲು ನೋವು ಸಾಮಾನ್ಯ. ಆದರೆ, ಈ ನೋವು ಹೆಚ್ಚಾದರೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಲೇ ಬೇಕು. ಇಂಥ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಂತರ ತಮ್ಮ ನೋವು ರಹಿತ ಜೀವನ ನಡೆಸುವುದು ಅತ್ಯಂತ ಸಂತಸ ನೀಡುತ್ತದೆ. ಅದರ ಅನುಭವ ಹಂಚಿಕೊಳ್ಳಲು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದವರು ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸ ನೀಡಿದೆ ಎಂದರು.
hospital

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ