ಬೆಂಗಳೂರು : ರಾಜ್ಯದ ಎರಡು ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣಾ ಸಮರದಲ್ಲಿ ಜೆಡಿ(ಎಸ್) ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನೇತೃತ್ವದ ಪಕ್ಷ ಜಾತ್ಯತೀತ ಪಕ್ಷ ಅಲ್ಲ. ಅದು ಕೋಮುವಾದಿ ಪಕ್ಷ ಎಂದು ಆರೋಪಿಸಿದ್ದಾರೆ.
"ಜೆಡಿಎಸ್ ಹಿಂದೆ ಬಿಜೆಪಿ ಜೊತೆ ಸರ್ಕಾರವನ್ನು ರಚಿಸಿತ್ತು(2006 ರಲ್ಲಿ), ಅವರು ಮೈಸೂರು ಕಾರ್ಪೋರೇಶನ್ ನಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಜೆಡಿ(ಎಸ್) ಯಾವ ಬಲವಾದ ಸಿದ್ಧಾಂತವನ್ನು ಹೊಂದಿದೆ? ಅವರು ಮುಸ್ಲಿಂ ಮತಗಳಿಗಾಗಿ ಯಾವತ್ತೂ ಅಲ್ಪಸಂಖ್ಯಾತರನ್ನು ಸಮಾಧಾನಪಡಿಸಲು ಪ್ರಯತ್ನಿಸಬಹುದು. ಆದರೆ ಮತದಾರರು ಬುದ್ಧಿವಂತರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.