BBMP ಅಧಿಕಾರಿಗಳ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್

ಗುರುವಾರ, 31 ಆಗಸ್ಟ್ 2023 (15:36 IST)
ಬಿಬಿಎಂಪಿ ಅಧಿಕಾರಿಗಳ‌ ವಿಷಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಮುಖಭಂಗವಹಿದೆ.ಡಿಕೆ ಶಿವಕುಮಾರ್‌ ಟಿಪ್ಪಣಿ ಆಧರಿಸಿದ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ಹೈಕೋರ್ಟ್ ತಡೆ ನೀಡಿದೆ.ಡಿಸಿಎಂ ಆದೇಶದ‌ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಬಿಬಿಎಂಪಿ ಅಧಿಕಾರಿಗಳ‌ ಮೇಲುಗೈ ಸಾಧಿಸಿದ್ದಾರೆ.ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಯಲ್ಲಿ, ಸ್ಥಳ ನಿಯೋಜನೆಯಲ್ಲಿ ಡಿಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಹಸ್ತಕ್ಷೇಪ ಮಾಡಿದೆ.ಆಗಸ್ಟ್ 10 ರಂದು ಡಿಸಿಎಂ ಡಿಕೆಶಿ ಅವರ ಟಿಪ್ಪಣಿ ಸೂಚನೆಯಂತೆ ಆಗಿದ್ದ ವರ್ಗಾವಣೆಗೆ ತಡೆ ಹಿಡಿಯಲಾಗಿದೆ.ಡಿಸಿಎಂ‌ ಡಿಕೆಶಿ‌ ಅವರ ಟಿಪ್ಪಣಿಯಂತೆ 27 ಅಧಿಕಾರಿಗಳ ಸ್ಥಳ ನಿಯೋಜನೆ, ವರ್ಗಾವಣೆ ಆಗಿತ್ತು.ಇದರ ವಿರುದ್ದ ಅನೀಸ್ ಫಾತಿಮಾ‌ ಸೇರಿದಂತೆ 17 ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.ಬಿಬಿಎಂಪಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಸೂಚಿಸುವ ಜೊತೆಗೆ 27 ಅಧಿಕಾರಿಗಳ ವಿರುದ್ದದ ಆದೇಶಕ್ಕೆ  ಹೈಕೋರ್ಟ್ ತಡೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ