ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಆ್ಯಪ್ ಹ್ಯಾಕ್
ಕರ್ನಾಟಕ ರಾಜ್ಯದ ಉಚ್ಛ ನ್ಯಾಯಾಲಯದ ಕಲಾಪಕ್ಕೂ ಸೈಬರ್ ಕಳ್ಳರ ಹಾವಳಿ ಉಂಟಾಗಿದೆ. ಹೈಕೋರ್ಟ್ ಕಲಾಪದ ವೇಳೆ ವಿಡಿಯೋ ಕಾನ್ಫೆರೆನ್ಸ್ ಆ್ಯಪ್ ಅನ್ನು ಹ್ಯಾಕ್ ಮಾಡಿ ಅಶ್ಲೀಲ ದೃಶ್ಯಾವಳಿಗಳನ್ನು ಅಪ್ಲೋಡ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಸ್ಥಗಿತಗೊಳಿಸಲಾಗಿದೆ.ಸಿಬ್ಬಂದಿಯನ್ನು ಕರೆದು ಕೇಳಿದಾಗ ಸೈಬರ್ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.