ದೇಶೀ ಮದ್ಯಕ್ಕೆ ಹೆಚ್ಚು ಬೇಡಿಕೆ

geetha

ಮಂಗಳವಾರ, 9 ಜನವರಿ 2024 (18:00 IST)
ಬೆಂಗಳೂರು-ಕಳೆದ ವರ್ಷ, ವಿದೇಶಿ ಮದ್ಯಕ್ಕಿಂತ ದೇಶಿ ಮದ್ಯ ಹೆಚ್ಚಾಗಿ ಮಾರಾಟವಾಗಿರುವ ವಿಷಯ ಬೆಳಕಿಗೆ ಬಂದಿದೆ. 2023ರಲ್ಲಿ ಭಾರತೀಯ ಕಂಪೆನಿ ಗಳು, ವಿದೇಶಿ ಕಂಪೆನಿ ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಸಿವೆ. ಕಳೆದ ವರ್ಷ ಭಾರತದಲ್ಲಿ ಮಾರಾಟವಾದ ಮದ್ಯ ದಲ್ಲಿ ಭಾರತೀಯ ಕಂಪನಿಗಳ ಮದ್ಯ ಶೇ.53 ರಷ್ಟು ಮಾರಾಟವಾಗಿದೆ.  ಇತಿಹಾಸದಲ್ಲೇ ಇಂತಹದ್ದೊಂದು ಮೊದಲ ಬಾರಿಗೆ ಸಾಧನೆ ದಾಖಲಾಗಿದೆ.

ಜಾಗತಿಕ ದೈತ್ಯ ಕಂಪೆನಿಗಳಾದ ಗ್ರೆನ್ಸಿವೆಟ್, ಮೆಕಾಲನ್, ಲಗಾವುಲಿನ್, ಟಾಲಿಸ್ಕರ್‌ನಂತಹ ದೈತ್ಯ ಕಂಪೆನಿಗಳನ್ನು ಭಾರತೀಯ ಕಂಪೆನಿಗಳು ಹಿಂದೆ ಹಾಕಿವೆ. ಸಿಐಎಬಿಸಿ ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳ ಪ್ರಕಾರ, ಒಟ್ಟು ದೇಶೀಯ ಮಾರಾಟದಲ್ಲಿ ಭಾರ ತೀಯ ಕಂಪೆನಿಗಳ ಪಾಲು ಶೇ.53. ಕಳೆದ ವರ್ಷ ಒಟ್ಟು 6,75,000 ಕೇಸ್‌ಗಳು ಮಾರಾಟವಾಗಿವೆ. ಅದರಲ್ಲಿ 3,45,000 ಕೇಸ್‌ಗಳು ಭಾರತೀಯ ಕಂಪೆ ನಿಗಳಿಗೆ ಸೇರಿವೆ. ಉಳಿದ 3.3 ಲಕ್ಷ ಕೇಸ್‌ಗಳು ಸ್ಮಾಟ್ರೆಂಡ್ ಮತ್ತು ಇತರ ದೇಶಗಳಿವೆ ಸೇರಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ