ಹೈಸ್ಕೂಲ್ ವಿದ್ಯಾರ್ಥಿ ಕೈ ಕತ್ತರಿಸಿದ ದುಷ್ಕರ್ಮಿಗಳು

ಶನಿವಾರ, 22 ಅಕ್ಟೋಬರ್ 2016 (20:15 IST)
ದುಷ್ಕರ್ಮಿಗಳ ಗುಂಪೊಂದು 10ನೇ ತರಗತಿಯ ವಿದ್ಯಾರ್ಥಿಯೊಬ್ಬನ ಮೇಲೆ ಮಾರಣಾಂತಿಕ ದಾಳಿ ಮಾಡಿ ಆತನ ಕೈ ಕತ್ತರಿಸಿದ ಅಮಾನವೀಯ ಘಟನೆ ನಗರದ ಸುಂಕದಕಟ್ಟೆ ಬಡಾವಣೆಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಬಾಲಕನನ್ನು 16 ವರ್ಷದ ಹರ್ಷ ಎಂದು ಗುರುತಿಸಲಾಗಿದ್ದು ಆತನನ್ನೀಗ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನನ ಕೈಯ್ಯನ್ನು ಶಸ್ತ್ರಚಿಕಿತ್ಸೆ ಮಾಡಿ ಜೋಡಿಸಲಾಗಿದೆ ಎಂದು ತಿಳಿದು ಬಂದಿದೆ.

ಶನಿವಾರ ರಾತ್ರಿ ಸುಂಕದಕಟ್ಟೆ ದೇವಸ್ಥಾನದ ಬಳಿ ಮಚ್ಚು-ಲಾಂಗು ಹಿಡಿದು ರಾಜಾರೋಷವಾಗಿ ಓಡಾಡಿಕೊಂಡಿದ್ದ 20 ಮಂದಿ ದುಷ್ಕರ್ಮಿಗಳ ಗುಂಪು  ಬಾಲಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಒಂದು ಬೈಕ್‌ನ್ನು ಜಖಂಗೊಳಿಸಿದ್ದಾರೆ. ಆರೋಪಗಳಲ್ಲಿ ಕೆಲವರನ್ನು ಗುರುತಿಸಲಾಗಿದ್ದು ಕಿರಣ್ ಅಲಿಯಾಸ್ ಕರಿಬಾಂಡ್ಲಿ, ದರ್ಶನ್, ಸಿಡಿ ಭರತ್, ಶರತ್, ಪ್ರಶಾಂತ್, ಅಭಿ, ಅನಿಲ್ ಎನ್ನಲಾಗುತ್ತಿದೆ.

ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ