ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ಹೆದ್ದಾರಿ ಬಂದ್

ಸೋಮವಾರ, 10 ಜೂನ್ 2019 (20:11 IST)
ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಬದಲಾಯಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆಯನ್ನು ನೂರಾರು ರೈತರು ನಡೆಸಿದ್ರು.

ಕೋಲಾರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸ್ಥಾಪಿತ ರೈತ ಸಂಘ ಹಾಗೂ ಹಸಿರು ಸೇನೆ  ಸಂಘಟನೆಯ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಕೋಲಾರ ರಾಷ್ಟೀಯ ಹೆದ್ದಾರಿ ಕೊಂಡರಾಜಹಳ್ಳಿ ಗೇಟ್ ಬಳಿ ರೈತ  ಸಂಘಟನೆ ಹಾಗೂ ವಿವಿಧ ರೈತ ಪರ ಸಂಘಟನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಬದಲಾಯಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ರು.

ರೈತರ ಒಪ್ಪಿಗೆ ಇಲ್ಲದೆ ಜಮೀನು ವಶಕ್ಕೆ ಪಡೆಯಬಾರದು. ಸ್ವಾಧೀನಪಡಿಸಿಕೊಂಡ ಜಮೀನಿಗೆ, ನಾಲ್ಕು ಪಟ್ಟು ದರವನ್ನು ಪರಿಹಾರವನ್ನಾಗಿ ಕೊಡಬೇಕು ಹಾಗೂ ಜಮೀನು ಕಳೆದು ರೈತರಿಗೆ ಪುನರ್ವಸತಿ ಕಲ್ಪಿಸಬೇಕೆಂಬ ನಿಯಮ ಸಡಿಸಿಲಿ ಏಕಗಂಟಿನ ಪರಿಹಾರ ಯೋಜನೆ ಮುಂದಾಗಿರುವ ಸರ್ಕಾರಗಳ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
 ಈ ಹೊಸ ಉದ್ದೇಶಿತ ತಿದ್ದುಪಡಿ ರೈತರ ಪಾಲಿಗೆ ಮರಣ ಶಾಸನವಾಗಲಿದೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ