ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿ ಕೇಸರಿ ಶಾಲು ಮತ್ತು ಪೇಟವನ್ನು ಕೊಟ್ಟವರ ಬಗ್ಗೆ ಕೂಡಲೇ ತನಿಖೆ ನಡೆಸಬೇ ಕೆಂದು ಯು.ಟಿ.ಖಾದರ್ ಗೃಹ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರರಿಗೆ ಮನವಿ ಮಾಡಿರುವ ಯು.ಟಿ.ಖಾದರ್, ಉಡುಪಿ ಜಿಲ್ಲೆಯಲ್ಲಿ ಪ್ರಾರಂಭವಾದಂತಹ ಶಾಲಾ-ಕಾಲೇಜು ವಿದ್ಯಾರ್ಥಿನಿಯರ ಶಿರವಸ್ತ್ರಕ್ಕೆ ಸಂಬಂ ಧಪಟ್ಟ ವಿವಾದ ಇದೀಗ ರಾಜ್ಯಾದ್ಯಂತ ಪ್ರತಿಧ್ವನಿಸುತ್ತಿದೆ.
ಹೈಕೋರ್ಟ್ ಮೆಟ್ಟಿಲೇರಿದೆ. ಉಡುಪಿಯಲ್ಲಿ ಈ ವಿವಾದ ಹೇಗೆ ಪ್ರಾರಂಭವಾಯಿತು? ಇದರಿಂದೇ ಯಾರು ಇದ್ದಾರೆ ಎಂಬ ತನಿಖೆ ಮಾಡಬೇಕೆಂದು ಸ್ಥಳೀಯ ಶಾಸಕರ ಕೋರಿಕೆ ಮೇರೆಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೀರಿ. ಇದರ ಜೊತೆಗೆ ಕುಂದಾಪುರದ ಭಂಡಾರ್ಕರ್ ಕಾಲೇಜು, ಉಡುಪಿಯ ಎಂ.ಜಿ.ಎಂ ಕಾಲೇಜು ಹಾಗೂ ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ನಡೆದ ಸಮಸ್ಯೆಗೆ ಕಾರಣಕರ್ತರು ಯಾರು? ಮುಗ್ದ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿ ಶಾಲು ಮತ್ತು ಪೇಟವನ್ನು ಕೊಟ್ಟವರು ಯಾರೆಂದು ಕೂಡಲೇ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.