ಬೆಂಗಳೂರು: ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರತಿಕ್ರಿಯಿಸಿದ್ದು,2023ರ ವಿಧಾನಸಭಾ ಚುನಾವಣೆಗೆ ಕರ್ನಾಟಕದ ರಾಜಕೀಯ ಪಕ್ಷಗಳು ಹಿಜಾಬ್ ವಿಷಯದ ಲಾಭ ಪಡೆಯುತ್ತಿವೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಕೆಲವು ಅಂಶಗಳು ಕೂಡ ಇದರಲ್ಲಿದ್ದು, ರಾಜಕೀಯ ಪಕ್ಷಗಳು 2023ರ ಚುನಾವಣೆಗಳ ಲಾಭವನ್ನು ಪಡೆಯುತ್ತಿವೆ. ಸರ್ಕಾರ ಇದನ್ನು ನಿಲ್ಲಿಸಬಹುದು. ಇಂತಹ ವಿಷಯಗಳು ದೇಶವನ್ನು ವಿಭಜಿಸುತ್ತವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರತಿಕ್ರಿಯಿಸಿದ್ದಾರೆ.
ಇನ್ನು, ಹಿಜಾಬ್-ಕೇಸರಿ ಶಾಲು ವಿವಾದ ರಾಜ್ಯದಾತ್ಯಂತ ತಾರಕಕ್ಕೇರಿದ್ದು,ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಲಾಗಿದ್ದು,ಕಾಲೇಜಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.