ಪಾದಯಾತ್ರೆ : ಇಂದಿನಿಂದ ಡಿಕೆಶಿ 3 ದಿನ ಮೌನ!

ಮಂಗಳವಾರ, 11 ಜನವರಿ 2022 (06:57 IST)
ರಾಮನಗರ : ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಸಂಘರ್ಷ ಇಂದು 3ನೇ ದಿನಕ್ಕೆ ಕಾಲಿಟ್ಟಿದೆ.

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಇಂದು ಕನಕಪುರದಿಂದ ಬೆಳಗ್ಗೆ 9.30ಕ್ಕೆ ಮುಂದುವರಿಯಲಿದೆ. ಪಾದಯಾತ್ರೆಯು ಮಧ್ಯಾಹ್ನ 1 ಗಂಟೆಗೆ ವೀರಭದ್ರಸ್ವಾಮಿ ದೇಗುಲ ಬಳಿ ಆಗಮನವಾಗಲಿದ್ದು, ಗಾಣಾಳು ವೀರಭದ್ರಸ್ವಾಮಿ ದೇಗುಲದ ಬಳಿಗೆ ತಲುಪಲಿದೆ.

ಕಾಂಗ್ರೆಸ್ ಕಾರ್ಯಕರ್ತರು ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಊಟ ಮಾಡಿ ನಂತರ ವಿಶ್ರಾಂತಿ ಪಡೆದು ಪಾದಯಾತ್ರೆ ಮೂಲಕ ಸಂಜೆ ವೇಳೆಗೆ ಚಿಕ್ಕೇನಹಳ್ಳಿ ತಲುಪಲಿದ್ದಾರೆ. ಇಂದು ರಾತ್ರಿ ಚಿಕ್ಕೇನಹಳ್ಳಿಯಲ್ಲಿ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಲಿದ್ದಾರೆ.

 ಈ ಮಧ್ಯೆ ಜ್ವರದಿಂದ ಬಳಲಿದ ಸಿದ್ದರಾಮಯ್ಯ ಅವರು ಪಾದಯಾತ್ರೆಗೆ ಮರಳಿ ಬರ್ತಾರಾ..? ಕನಕಪುರದಿಂದ ಕಾಲ್ನಡಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸಾಥ್ ಕೊಡ್ತಾರಾ ಎಂಬುದು ಕುತೂಹಲಕಾರಿಯಾಗಿದೆ.

ಮೇಕೆದಾಟು ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದಿನಿಂದ ಮೂರು ದಿನ ಮೌನ ವ್ರತಾಚರಣೆ ನಡೆಸು ತೀರ್ಮಾನತೆಗೆದುಕೊಂಡಿದ್ದು, ಅಚ್ಚರಿ ಮೂಡಿಸಿದ್ದಾರೆ.
ರಾಜಕೀಯ ಸಲಹಾ ತಂಡ ನೀಡಿರುವ ಸಲಹೆ ಮೇರೆಗೆ ಡಿ ಕೆ ಶಿವಕುಮಾರ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಮೂರು ದಿನಗಳ ಮೌನ ಬೇಡ ಎಂದೂ ಇತರ ನಾಯಕರು ಸಲಹೆ ನೀಡಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಮಾತನಾಡಿದರೆ ಜನಗಳಿಗೆ ಸಂದೇಶ ರವಾನೆಯಾಗಲಿದೆ, ಹೀಗಾಗಿ ಮಾತನಾಡಿ ಎಂದಿರುವ ಹಿರಿಯ ನಾಯಕರು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ