ಶಬರಿ ಮಲೈಗೆ ಮಹಿಳೆ ಪ್ರವೇಶ ವಿರೋಧಿಸಿ ಧರ್ಮ ಜಾಗೃತಿ ಪಾದಯಾತ್ರೆ

ಶನಿವಾರ, 15 ಡಿಸೆಂಬರ್ 2018 (17:19 IST)
ಶಬರಿಮಲೈಯಲ್ಲಿ ಧಾರ್ಮಿಕಾಚರಣೆ, ಸಂಸ್ಕೃತಿ, ಸಾಂಪ್ರದಾಯ ಉಳಿವಿಗಾಗಿ  "ಶ್ರೀಅಯ್ಯಪ್ಪಸ್ವಾಮಿ ಧರ್ಮಸಂರಕ್ಷಣಾ ವೇದಿಕೆವತಿಯಿಂದ ನಗರದ  ಶ್ರೀಅಯ್ಯಪ್ಪ ದೇವಸ್ಥಾನದಿಂದ ತಾಲ್ಲೂಕು ಕಛೇರಿವರೆಗೆ ಧರ್ಮ ಜಾಗೃತಿ ಬೃಹತ್ ಪಾದಯಾತ್ರೆ ನಡೆಯಿತು.  

ಹೊಸಪೇಟೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಆರ್ಚಕ ಶಂಕರನ್ ನಂಬೂದರಿ ನೇತೃತ್ವದಲ್ಲಿ
ಪಾದಯಾತ್ರೆ ನಡೆಸಿದ ಅಯ್ಯಪ್ಪ ಭಕ್ತರು, ಶಬರಿಮಲೈಗೆ ಮಹಿಳೆ ಪ್ರವೇಶ ಕುರಿತು ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ ಮರು ಪರಿಶೀಲಿಸಬೇಕು ಎಂದು  ಒತ್ತಾಯಿಸಿದರು.

 ಸುಪ್ರೀಂಕೋರ್ಟ್ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದು ಇಲ್ಲಿನ ಧಾರ್ಮಿಕ ಆಚರಣೆ, ಸಂಪ್ರದಾಯಕ್ಕೆ ಧಕ್ಕೆಯುಂಟಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಕಮ್ಯೂನಿಸ್ಟ್ ಸರ್ಕಾರ, ಶಬರಿಮೈಲೆಯಲ್ಲಿ ಭಕ್ತರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಶಬರಿಮೈಲೆಯಲ್ಲಿ 144 ಸೆಕ್ಷನ್ ಜಾರಿ ಮಾಡುವ ಮೂಲಕ ಬೆಟ್ಟದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ವಸತಿ, ಉಟ,ಉಪಹಾರ, ಶೌಚಾಲಯ, ಬೀದಿ ದೀಪಗಳ ಸಂಪರ್ಕ ಕಡಿತಗೊಳಿಸಿ, ಭಕ್ತರಿಗೆ ತೊಂದರೆ ನೀಡಿದೆ ಎಂದು ದೂರಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ