ಪ್ರತಿನಿತ್ಯ ಮನೆಯಲ್ಲಿ ಶಂಖನಾದ ಮಾಡುವುದರ ಲಾಭವೇನು ಗೊತ್ತಾ?
ಶನಿವಾರ, 15 ಡಿಸೆಂಬರ್ 2018 (09:23 IST)
ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿನಿತ್ಯ ಹಲವು ಮನೆಗಳಲ್ಲಿ ಸಂಜೆ ಅಥವಾ ಬೆಳಿಗ್ಗೆ ದೀಪ ಹಚ್ಚಿ ಶಂಖನಾದ ಮಾಡಿ ದೇವರಿಗೆ ವಂದಿಸುವ ರೂಡಿಯಿರುತ್ತದೆ. ಶಂಖ ನಾದದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?
ಶಂಖನಾದ ಎನ್ನುವುದು ಸತ್ಯದ, ಶುಭದ ಸಂಕೇತ. ಅಲ್ಲದೆ, ಇದರಲ್ಲಿ ರಾಕ್ಷಸ ಗುಣಗಳನ್ನು ಓಡಿಸುವ ಗುಣವಿದೆಯಂತೆ. ಅದೇ ಕಾರಣಕ್ಕೆ ಮುಸ್ಸಂಜೆ ವೇಳೆ ಶಂಖನಾದ ಮಾಡಲಾಗುತ್ತದೆ ಎಂಬುದು ನಂಬಿಕೆ.
ಶಂಖನಾದ ಮಾಡುವುದರಿಂದ ಮನೆಯ ಸುತ್ತವಿರುವ ದುಷ್ಟ ಶಕ್ತಿಗಳು ನಿವಾರಣೆಯಾಗಿ ಅದರಿಂದ ಹೊರ ಹೊಮ್ಮು ಓಂ ಎನ್ನುವ ನಾದ ಮನೆಯಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಸುತ್ತದೆ.
ಅಷ್ಟೇ ಅಲ್ಲದೆ, ಶಂಖನಾದದಿಂದ ಆರೋಗ್ಯಕ್ಕೂ ಲಾಭಗಳಿವೆ. ಮಕ್ಕಳು ಮಾತನಾಡಲು ತೊದಲುತ್ತಿದ್ದರೆ ಅಂತಹವರಿಗೆ ಶಂಖನಾದ ಮಾಡಲು ಹೇಳಿದರೆ ಅವರ ನಾಲಿಗೆ ಸರಿಯಾಗಿ ಹೊರಳಾಡುತ್ತದೆ. ಅಷ್ಟೇ ಅಲ್ಲದೆ, ಶಂಖನಾದ ನಮ್ಮ ಹೃದಯ ಬಡಿತ ಸಮಸ್ಥಿತಿಗೆ ತರುವುದಲ್ಲದೆ, ಉಸಿರಾಟಕ್ಕೆ ವ್ಯಾಯಾಮ ಸಿಕ್ಕಿದಂತಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ