ರಂಜಾನ್ ದಿನ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಬೇಡಿ ಎನ್ನುವ ತಾಕತ್ತಿದ್ಯಾ ನಿಮಗೆ: ಪುನೀತ್ ಕೆರೆಹಳ್ಳಿ

Krishnaveni K

ಶುಕ್ರವಾರ, 17 ಅಕ್ಟೋಬರ್ 2025 (09:26 IST)
ಬೆಂಗಳೂರು: ಆರ್ ಎಸ್ಎಸ್ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರಕ್ಕೆ ಹಿಂದೂ ಸಂಘಟನೆ ನಾಯಕ ಪುನೀತ್ ಕೆರೆಹಳ್ಳಿ ಸವಾಲು ಹಾಕಿದ್ದು, ಇದೇ ರೀತಿ ಮುಸ್ಲಿಮರಿಗೆ ರಂಜಾನ್ ದಿನ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಬಾರದು ಎಂದು ಹೇಳುವ ಧೈರ್ಯ ನಿಮಗಿದೆಯಾ ಎಂದು ಕೇಳಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅವರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ‘ಹಿಂದೂಗಳೇ ಮತ ಹಾಕಿ ಗೆಲ್ಲಿಸಿದ ಸರ್ಕಾರವೊಂದು ಹಿಂದೂಗಳ ಮೇಲೆ ಅದೆಷ್ಟು ಗದಾಪ್ರಹಾರ, ಶೋಷಣೆ ಮಾಡುತ್ತೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಘಟನೆಯನ್ನು ತುಳಿಯುವ ಯತ್ನವನ್ನು ಒಂದು ಸರ್ಕಾರ ಮಾಡುತ್ತದೆ ಎಂದಾಗ ನೀವು ಮತ ಹಾಕುವ ಹಿಂದೂಗಳು ಜಾಗೃತರಾಗಬೇಕು.

ಈವತ್ತು ಮಂತ್ರಿಗಳೊಬ್ಬರ ಪತ್ರ ನಿಮಗೆಲ್ಲಾ ಗೊತ್ತಿರಬಹುದು. ಸರ್ಕಾರದ ಸ್ಥಳಗಳಲ್ಲಿ, ಮೈದಾನಗಳಲ್ಲಿ, ಶಾಲೆಗಳು, ಮುಜರಾಯಿ ಇಲಾಖೆಗಳಿಗೆ ಸೇರಿದ ಸ್ಥಳಗಳಲ್ಲಿ ಆರ್ ಎಸ್ಎಸ್ ಚಟುವಟಿಕೆಗಳನ್ನು ನಿರ್ಬಂಧಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಾರೆ.

ಇವರು ಯಾವತ್ತಾದರೂ ಹಿಂದೂ ಸಂಘಟನೆಗಳಿಗೆ ಮಾಡಿದಂತೆ ಬಕ್ರೀದ್, ರಂಜಾನ್ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಆಸ್ತಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆಗಳಲ್ಲಿ ಮುಸಲ್ಮಾನರ ಸಂಘಟನೆಗಳ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು ಎಂದು ಈ ಮಂತ್ರಿಗಳು ಪತ್ರ ಬರೆದ್ರಾ? ಇದನ್ನು ನಾವು ಕೇಳಿದ್ರೆ ಕೋಮುವಾದಿಗಳು ಎನ್ನುತ್ತಾರೆ.

ಇದು ಈವತ್ತಿನ ಸಮಸ್ಯೆಯಲ್ಲ. ಮೊಘಲರ ಕಾಲದಿಂದಲೂ ನಮ್ಮನ್ನು ಜಾತಿಗಳ ಹೆಸರಿನಿಂದ ಒಡೆಯತ್ತಲೇ ಇದ್ದಾರೆ. ಆದರೆ ಇನ್ನು ಈ ರೀತಿ ಆಗದಂತೆ ನಾವು ನೋಡಿಕೊಳ್ಳಬೇಕು. ಮತ ಹಾಕಬೇಕಾದರೆ ಆರ್ ಎಸ್ಎಸ್ ಗೆ ಸುದ್ದಿಗೆ ಮತ್ತೆ ಯಾರೂ ಬರಬಾರದು. ಆ ರೀತಿ ಮತ ಹಾಕಿ ಬುದ್ಧಿ ಕಲಿಸಿ. ಹಿಂದೂಗಳೇ ಜಾಗೃತರಾಗಿ’ ಎಂದು ಕರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ