ಕರ್ನಾಟಕದ ಹಿಂದೂ ದೇವಾಲಯಗಳಲ್ಲಿ ಹಿಂದೂಯೇತರ ಅಧಿಕಾರಿಗಳಿಗೆ ಅವಕಾಶ ನೀಡಲಾಗುತ್ತಿದೆ ಆರೋಪ

Krishnaveni K

ಗುರುವಾರ, 23 ಮೇ 2024 (10:10 IST)
ಬೆಂಗಳೂರು: ಹಿಂದೂ ದೇವಾಲಯಗಳ ಆಡಳಿತ ಮತ್ತು ಆದಾಯದ ಕುರಿತಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಹೊಸ  ಕಾನೂನು ತಿದ್ದುಪಡಿಯನ್ನು ಇತ್ತೀಚೆಗೆ ಅಧಿವೇಶನದಲ್ಲಿ ಮಂಡಿಸಿತ್ತು. ಇದಾದ ಬಳಿಕ ದೇವಾಲಯಗಳ ಕುರಿತಾಗಿ ಒಂದೊಂದೇ ವಿವಾದಗಳು ಕೇಳಿಬರುತ್ತಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಿಂದೂ ದೇವಾಲಯಗಳಲ್ಲಿ ಹಿಂದೂ ಸಮುದಾಯದ ಅಧಿಕಾರಿಗಳನ್ನೇ ನೇಮಕ ಮಾಡುವುದು ಈ ಮೊದಲಿನಿಂದಲೂ ನಡೆದುಕೊಂಡ ಬಂದ ಪದ್ಧತಿಯಾಗಿತ್ತು. ಆದರೆ ಇತ್ತೀಚೆಗೆ ಹಿಂದೂಯೇತರ ಅಧಿಕಾರಿಗಳಿಗೂ ಅಧಿಕಾರ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಯೇಸುರಾಜ್ ಎಂಬವರನ್ನು ಎಇಒ ಆಗಿ ನೇಮಕ ಮಾಡಿತ್ತು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಕೊನೆಗೆ ಸ್ವತಃ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಯೇಸು ರಾಜ್ ಹಿಂದೂ ಸಮುದಾಯದವರೇ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಅವರ ಹೆಸರು ಕೇಳಿದ ಮೇಲೆ ಹಿಂದೂ ಸಮುದಾಯದವರಿಗೆ ಸರ್ಕಾರದ ಸ್ಪಷ್ಟನೆ ತೃಪ್ತಿ ತಂದಿಲ್ಲ.

ಆದರೆ ಸಿದ್ದರಾಮಯ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದ ಹೊಸ ತಿದ್ದುಪಡಿಯ ಪ್ರಕಾರ ಈಗ ಹಿಂದೂ ದೇವಾಲಯಗಳಿಗೆ ಹಿಂದೂ ಸಮುದಾಯದವರನ್ನೇ ನೇಮಿಸಬಹುದು ಎಂದು ಸ್ಪಷ್ಟವಾಗಿ ಹೇಳಲಾಗಿಲ್ಲ. ಇದು ವಿವಾದಕ್ಕೆ ಕಾರಣವಾಗಿದೆ. ಇದರ ಬಗ್ಗೆ ಹಿಂದೂ ಸಂಘಟನೆಗಳಿಂದ ಆಕ್ರೋಶ ಕೇಳಿಬರುತ್ತಲೇ ಇದೆ.

ಸರ್ಕಾರ ಯಾಕೆ ಯಾವಾಗಲೂ ಹಿಂದೂ ದೇವಾಲಯಗಳನ್ನೇ ಟಾರ್ಗೆಟ್ ಮಾಡುತ್ತಿದೆ. ಮೊದಲೇ ಹಿಂದೂಗಳು ಮತಾಂತರ ಭೀತಿಯಲ್ಲಿದ್ದಾರೆ. ಈ ನಡುವೆ ಹಿಂದೂಯೇತರ ಅಧಿಕಾರಿಗಳನ್ನು ನೇಮಿಸಿದರೆ ಅವರಿಗೆ ನಮ್ಮ ದೇವಾಲಯಗಳ ಸಂಪ್ರದಾಯ, ಪದ್ಧತಿಗಳ ಜ್ಞಾನವೇ ಇರುವುದಿಲ್ಲ. ಅಂತಹವರನ್ನು ನೇಮಿಸುವ ಉದ್ದೇಶವೇನು? ನಮ್ಮ ದೇವಾಲಯಗಳಿಗೆ ನಮ್ಮದೇ ಸಮುದಾಯದ ಅಧಿಕಾರಿಗಳು ಸಿಗುವುದಿಲ್ಲವೇ ಎಂದು ಹಿಂದೂ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ