ಹಿಂದೂ ಯುವತಿ ಮತಾಂತರಕ್ಕೆ ಯತ್ನ?
ಮಂಗಳೂರಿನ ಹೆರಿಗೆ ಆಸ್ಪತ್ರೆಯ ವೈದ್ಯೆ ಡಾ. ಜಮೀಲಾ ಹಿಂದೂ ಯುವತಿಯನ್ನು ಮತಾಂತರವಾಗುವಂತೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮನೆ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದಾರೆ. ಖಲೀಲ್ ಮತ್ತು ಇಮ್ರಾನ್ ಎಂಬುವವರು ಲೈಂಗಿಕ ಕಿರುಕುಳ ನೀಡಿದ್ದಾರೆ ಅಂತಾ ಯುವತಿ ಆರೋಪಿಸಿದ್ದಾಳೆ. ಯುವತಿಯ ಹೆಸರನ್ನು ಕೂಡ ಆಯೇಷಾ ಎಂದು ಬದಲು ಮಾಡಿದ್ದಾರೆಂದು ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಸಲಾಗಿದೆ.