ದನದ ವ್ಯಾಪಾರಿ ಹುಸೇನಬ್ಬ( 62) ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಎಸ್ಸೈ ಬಂಧನ ಆಗಿದೆ ಎಂದು ಮೂಲಗಳು ತಿಳಿಸಿವೆ.
ಡಿ.ಎನ್.ಕುಮಾರ್ ಬಂಧಿತ ಹಿರಿಯಡ್ಕ ಠಾಣಾ ಎಸ್ಸೈ ಆಗಿದ್ದಾರೆ. ಪೊಲೀಸ್ ಜೀಪು ಚಾಲಕ ಗೋಪಾಲ್ ಹಾಗೂ ಹೆಡ್ ಕಾನ್ ಸ್ಟೇಬಲ್ ಮೋಹನ ಕೋತ್ವಾಲ್ ಬಂಧನವಾಗಿದೆ ಎನ್ನಲಾಗಿದೆ.
ಬಜರಂಗದಳ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದ ಹುಸೇನಬ್ಬ ಸಾವನ್ನಪ್ಪಿದ್ದರು. ಘಟನಾ ಸ್ಥಳದಲ್ಲಿದ್ದ ಎಸ್ಸೈ ಕುಮಾರ್ ಕೃತ್ಯ ಬೆಳಕಿಗೆ ಬಂದ ನಂತರ ಎಸ್ಸೈ ಡಿ.ಎನ್.ಕುಮಾರ್ ಅಮಾನತಾಗಿದ್ದರು.
ಬಜರಂಗದಳ ಕಾರ್ಯಕರ್ತರು ಹುಸೇನಬ್ಬ ಮೇಲೆ ಹಲ್ಲೆ ಮಾಡಿದ್ದರು. ಅಕ್ರಮ ಗೋ ಸಾಗಾಟದ ಕಾರಣಕ್ಕೆ ನಡೆದಿದ್ದ ಹಲ್ಲೆ ಘಟನೆ ಅದಾಗಿತ್ತು. ಹಲ್ಲೆ ಗೊಳಗಾದ ಹುಸೇನಬ್ಬ ಪೊಲೀಸ್ ಜೀಪಿನಲ್ಲಿ ಸಾವನ್ನಪ್ಪಿದ್ದರು.
ಆರೋಪಿಗಳ ಸಹಾಯ ಪಡೆದು ಶವವನ್ನು ಸಾಗಿಸಿದ್ದ ಎಸ್ಸೈ ಕುಮಾರ್. ಹೃದಯಾಘಾತದಿಂದ ಸತ್ತರೆಂದು ಬಿಂಬಿಸುವ ಪ್ರಯತ್ನ ನಡೆಸಿದ್ದರು. ಘಟನಾ ಸ್ಥಳದಿಂದ ಒಂದು ಕಿಮೀ ದೂರ ಶವ ಇರಿಸಿದ್ದರು ಎಂದು ಆರೋಪಿಸಲಾಗಿದೆ.
ಈ ಕಾರಣಕ್ಕೆ ಮೂವರು ಪೊಲೀಸರ ದಸ್ತಗಿರಿ ಮಾಡಲಾಗಿದೆ. ಸೂರಿ, ಪ್ರಸಾದ್, ಉಮೇಶ್, ಚೇತನ್, ಶೈಲೇಶ್,ಗಣೇಶ್ ನಾಯ್ಕ್ ರತನ್ ಈಗಾಗಲೇ ಬಂಧನವಾಗಿದ್ದಾರೆ. ಬಂಧಿತರು ಭಜರಂಗದಳ ಕಾರ್ಯಕರ್ತರು ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತ ಹುಸೇನಬ್ಬ ಮಂಗಳೂರು ಜೋಕಟ್ಟೆ ನಿವಾಸಿಯಾಗಿದ್ದಾರೆ. ಮೇ.30 ರಂದು ಇಂತಹ ಹೀನ ಕೃತ್ಯ ನಡೆದಿತ್ತು.