ಐತಿಹಾಸಿಕ ವೆಸ್ಲಿ ಸೇತುವೆ ಮುಳುಗಡೆ

ಮಂಗಳವಾರ, 17 ಜುಲೈ 2018 (18:16 IST)
ನದಿ ನೀರಿನ ರಭಸಕ್ಕೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದ   200 ವರ್ಷಗಳ  ಐತಿಹಾಸಿಕ ಸೇತುವೆ, ನೋಡ ನೋಡುತ್ತಲೇ ಕಣ್ಮರೆಯಾಯಾಗಿದೆ

ಕಾವೇರಿಯ ರಭಸಕ್ಕೆ 200 ವರ್ಷಗಳ ಐತಿಹಾಸಿಕ ಸೇತುವೆ ಕೊಚ್ಚಿಹೋಗಿರುವ ಘಟನೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಕೋಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತಕ್ಕೆ ಹೋಗುವ ಮುನ್ನಾ ಸಿಗುವ ಐತಿಹಾಸಿಕ ವೆಸ್ಲಿ ಸೇತುವೆ ನೀರಿನ ಸೆಳವಿಗೆ ಸಿಲುಕಿ  ಇನ್ನಿಲ್ಲದಂತಾಗಿದೆ. ಟಿಪ್ಪು ಸುಲ್ತಾನ್ ರಾಜಾಡಳಿತದ 1818 ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆಯನ್ನ ಕಟ್ಟಲಾಗಿತ್ತು. 200 ವರ್ಷಗಳ ಹಿಂದೆ ಕಟ್ಟಿದ್ದ ಸೇತುವೆಗೆ  ಪರ್ಯಾಯವಾಗಿ ಮತ್ತೊಂದು ಸೇತುವೆ ನಿರ್ಮಾಣಗೊಂಡಿದೆಯಾದರೂ ಈ ಸೇತುವೆ ಮೂಲಕವೇ ಅನೇಕ ಪ್ರವಾಸಿಗರು ಭರಚುಕ್ಕಿಗೆ ತೆರಳಲು ಇಚ್ಛಿಸುತ್ತಿದ್ದರು.

ಸಂಪೂರ್ಣವಾಗಿ ಕಲ್ಲಿನಿಂದಲೇ ಕಟ್ಟಿರುವ ವೆಸ್ಲಿ ಸೇತುವೆ ಬಳಿ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಕಳೆದ ಮೂರು ದಿನದಿಂದ ಪ್ರವಾಸಿಗರಿಗೆ ಸ್ಥಳೀಯ ಆಡಳಿತ ನಿರ್ಬಂಧ ಹೇರಿತ್ತು. ಒಂದು ವೇಳೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಭಾರೀ ಅನಾಹುತವೇ ಸಂಭವಿಸುವುದರಲ್ಲಿ ಅನುಮಾನವೇ ಇಲ್ಲದಂತಾಗಿದೆ.  ಪ್ರವಾಸಿಗರನ್ನ ಆಕರ್ಷಿಸಿ, ಕೈ ಬೀಸಿ ಕರೆಯುತ್ತಿದ್ದ ಚಾಮರಾಜನಗರ ಜಿಲ್ಲೆಯ ಐತಿಹಾಸಿಕ ವೆಸ್ಲಿ ಸೇತುವೆ ಕಾವೇರಿ ಸೆಳತಕ್ಕೆ ಇದೀಗ ಇತಿಹಾಸದ ಪುಟ ಸೇರಿದೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ