ಪ್ರಕರಣದಲ್ಲಿ ಒಟ್ಟು 101 ಮಂದಿ ಆರೋಪಿಗಳಿದ್ದರು. ಈ ಪೈಕಿ 98 ಮಂದಿಗೆ ಜೀವಾವಧಿ ಶಿಕ್ಷೆ, ಉಳಿದ ಮೂವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 2004 ರಲ್ಲಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸವರ್ಣೀಯರು ಭತ್ತ ಸಂಗ್ರಹ ಮಾಡುತ್ತಿದ್ದುದನ್ನು ದಲಿತರು ಪ್ರಶ್ನೆ ಮಾಡಿದ್ದರು. ಈ ಸಂಬಂಧ ದಲಿತರು ಮತ್ತು ಸವರ್ಣೀಯರ ನಡುವೆ ಅಸಮಾಧಾನ ಭುಗಿಲೆದ್ದಿತ್ತು. 2014 ರಲ್ಲಿ ಶಿವೆ ಚಿತ್ರಮಂದಿರದಲ್ಲಿ ಕ್ಷುಲ್ಲುಕ ಕಾರಣಕ್ಕೆ ಇಬ್ಬರು ದಲಿತ ಯುವಕರ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ್ದರು. ಇದು ಎರಡೂ ವರ್ಗದವರ ನಡುವೆ ಘರ್ಷಣೆ ಹೆಚ್ಚಾಗಲು ಕಾರಣವಾಗಿತ್ತು. ಈ ವೇಳೆ ಸವರ್ಣೀಯರು ದಲಿತರ ಕೇರಿಗೆ ನುಗ್ಗಿ ಬೆಂಕಿ ಹಚ್ಚಿದ್ದರು. ಅಷ್ಟೇ ಅಲ್ಲದೆ, ದಲಿತರ ಕ್ಷೌರದ ಅಂಗಡಿ, ಕೂಲಿ ಕೆಲಸಕ್ಕೆ ಬಹಿಷ್ಕಾರ ಹಾಕಿದ್ದರು. ಈ ಘರ್ಷಣೆಗೆ ಸಂಬಂಧಿಸಿದಂತೆ ಈಗ ಕೋರ್ಟ್ ಮಹತ್ವದ ತೀರ್ಪು ನೀಡಿದೆ.