Hizab vs Janeu: ನಿಮಗೆ ಜನಿವಾರ ಎಷ್ಟು ಮುಖ್ಯವೋ ನಮಗೆ ಹಿಜಾಬ್ ಕೂಡಾ ಮುಖ್ಯ: ಅಲಿಯಾ ಅಸ್ಸಾದಿ ಟ್ವೀಟ್ ಕಿಡಿ

Krishnaveni K

ಮಂಗಳವಾರ, 22 ಏಪ್ರಿಲ್ 2025 (12:30 IST)
Photo Credit: X
ಬೆಂಗಳೂರು: ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಸುದ್ದಿಯಾಗುತ್ತಿದ್ದಂತೇ ಇದೀಗ ಹಿಜಾಬ್ ಹೋರಾಟಗಾರ್ತಿ ಅಲಿಯಾ ಅಸ್ಸಾದಿ ಟ್ವೀಟ್ ಹೊಸ ಕಿಡಿ ಹೊತ್ತಿಸಿದೆ.
 

ನಿಮಗೆ ಜನಿವಾರ ಎಷಟು ಮುಖ್ಯವೋ ನಮಗೆ ಹಿಜಾಬ್ ಕೂಡಾ ಅಷ್ಟೇ ಮುಖ್ಯ ಎಂದಿದ್ದಾರೆ. ಜನಿವಾರ ಹಾಕಿದ ಮಾತ್ರಕ್ಕೆ ಪರೀಕ್ಷೆಗೆ ಬಹಿಷ್ಕರಿಸಲ್ಪಟ್ಟ ವಿದ್ಯಾರ್ಥಿಯ ನೋವು ಮತ್ತು ಹಿಜಾಬ್ ಹಾಕಿದ ಕಾರಣಕ್ಕೆ ಪರೀಕ್ಷೆ ಬಹಿಷ್ಕರಿಸಲ್ಪಟ್ಟ ಮುಸ್ಲಿಂ ಹೆಣ್ಮಕ್ಕಳ ನೋವು ಒಂದೇ ಅಲ್ಲವೇ?

 ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಉಚಿತ ಸೀಟು ಕೊಡುತ್ತೀರಿ. ನಮ್ಮನ್ನು ಇದುವರೆಗೂ ಪರೀಕ್ಷೆ ಬರೆದಿದ್ದೀರೋ ಇಲ್ಲವೋ ಎಂದು ಸೌಜನ್ಯಕ್ಕಾದರೂ ಕೇಳಿಲ್ಲ. ಇದು ನಮ್ಮ ವ್ಯವಸ್ಥೆ ಎಂದು ಅಲಿಯಾ ಟ್ವೀಟ್ ಮಾಡಿದ್ದಾರೆ.

ಅವರ ಈ ಟ್ವೀಟ್ ಮತ್ತೆ ಹಿಜಾಬ್ ಕಿಡಿ ಜೋರಾಗುವಂತೆ ಮಾಡಿದೆ. ಜನಿವಾರ ತೆಗೆದ ಅಧಿಕಾರಿಯನ್ನು ತಕ್ಷಣವೇ ಸಸ್ಪೆಂಡ್ ಮಾಡುತ್ತಾರೆ. ಆದರೆ ಹಿಜಾಬಿಗಳಿಗೆ ಕಾಲೇಜು ಗೇಟ್ ಬಂದ್ ಮಾಡಿದ ಅಧಿಕಾರಿಗಳಿಗೆ ಯಾವ ಶಿಕ್ಷೆಯೂ ಇಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ