ಗೃಹ ಖಾತೆ ಸಚಿವ ಜಿ. ಪರಮೇಶ್ವರ್ ದಲಿತರ ಕುರಿತು ಭಾಷಣ ಮಾಡುತ್ತಾರೆ. ವೇದಿಕೆಯಲ್ಲಿ ದಲಿತರ ಅನುಭವಿಸುತ್ತಿರುವ ಕಷ್ಟದ ಕುರಿತು ಕಣ್ಣೀರು ಸುರಿಸುತ್ತಾರೆ. ಆದರೆ, ಭ್ರಷ್ಟಾಚಾರ ಆರೋಪ ಹೊತ್ತು ವರ್ಗಾವಣೆಯಾದ ಮಧುರ ವೀಣಾ ಪ್ರಕರಣದ ಕುರಿತು ಯಾವುತ್ತು ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ದಲಿತ ಮುಖಂಡರು ಜಿ. ಪರಮೇಶ್ವರ್ ವಿರುದ್ಧ ಆರೋಪ ಮಾಡಿದ್ದಾರೆ.
ಸಿಎಂ ಜನತಾದರ್ಶನದಲ್ಲಿ ದಲಿತ ಮಹಿಳೆಗೆ ನೀಡಿರುವ ಕಿರುಕುಳ ಕುರಿತು ಇಡೀ ರಾಜ್ಯವೇ ಮಾತನಾಡುತ್ತಿದೆ. ಈ ಕುರಿತು ಗೃಹ ಮಂತ್ರಿಯವರು ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ, ಭ್ರಷ್ಟ ಅಧಿಕಾರಿ ಶಾಂತ ಕುಮಾರ್ ಅವರನ್ನು ಮಾತ್ರ ಅಧಿಕಾರದಲ್ಲಿ ಮುಂದುವರೆಸಿ ದಲಿತರ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದಲಿತ ಸಂಘಟನೆಗಳು ಜಿ. ಪರಮೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.